ವಿಕಲ ಚೇತನ ಕ್ರಿಕೆಟ್ ತಂಡಕ್ಕೆ ಹರ್ಭಜನ್ ಪ್ರಾಯೋಜಕತ್ವ

ಹೊಸದಿಲ್ಲಿ, ಜೂ.29: ಮುಂದಿನ ತಿಂಗಳು ತ್ರಿಕೋನ ಸರಣಿಯನ್ನು ಆಡಲು ಅಫ್ಘಾನಿಸ್ತಾನಕ್ಕೆ ತೆರಳಲಿರುವ ಭಾರತದ ವಿಕಲಚೇತನರ ಕ್ರಿಕೆಟ್ ತಂಡಗಳ ಉಡುಪಿನ ಪ್ರಾಯೋಜಕತ್ವ ನೀಡಲು ಹರ್ಭಜನ್ ಸಿಂಗ್ ಮುಂದಾಗಿದ್ದಾರೆ.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯಿಂದ ತ್ರಿಕೋನ ಸರಣಿ ಆಡಲು ಆಹ್ವಾನ ಬಂದ ತಕ್ಷಣ ವಿಕಲಚೇತನರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ರವಿ ಚೌಹಾಣ್ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್‌ರನ್ನು ಭೇಟಿಯಾಗಿದ್ದರು.
‘‘ನಮ್ಮ ಹುಡುಗರ ಪ್ರದರ್ಶನದ ಬಗ್ಗೆ ಹರ್ಭಜನ್‌ಗೆ ನಿರಂತರವಾಗಿ ಮಾಹಿತಿ ನೀಡುತ್ತಿದ್ದೆವು. ಕಿಟ್ಸ್ ಪ್ರಾಯೋಜಕತ್ವ ವಹಿಸಿಕೊಳ್ಳುವಂತೆ ನಾನು ವಿನಂತಿಸಿದ್ದೆ.ಅದಕ್ಕವರು ತಕ್ಷಣವೇ ಒಪ್ಪಿಗೆ ಸೂಚಿಸಿದರು. ನಮಗೆ ನೆರವು ನೀಡಿರುವ ಹರ್ಭಜನ್‌ಗೆ ಋಣಿಯಾಗಿರುವೆವು. ನಾವು ಕಿಟ್ಸ್ ಖರೀದಿಸಿದ್ದರೆ 3 ಲಕ್ಷ ರೂ. ವೆಚ್ಚವಾಗುತ್ತಿತ್ತು’’ಎಂದು ಚೌಹಾಣ್ ಹೇಳಿದರು.
Next Story





