ವೀರಾಜಪೇಟೆ: ಬಸ್-ಕಾರು ಢಿಕ್ಕಿ
ಚಾಲಕ, ಎರಡು ಮಕ್ಕಳ ಸ್ಥಿತಿ ಗಂಭೀರ

ವೀರಾಜಪೇಟೆ,ಜೂ.29: ವೀರಾಜಪೇಟೆ ಬಳಿಯ ಕೊಳತೋಡು ಬೈಗೋಡು ಗ್ರಾಡಿಮದ ರಸ್ತೆಯ ತಿರುವಿನಲ್ಲಿ ನಿನ್ನೆ ಸಂಜೆ ಸಂಭವಿಸಿದ ಕಾರು ಹಾಗೂ ಖಾಸಗಿ ಬಸ್ ನಡುವಿನ ಅಪಘಾತದಲ್ಲ್ಲಿ ಕೇರಳ ಮೂಲದ ಇಬ್ಬರು ಮಕ್ಕಳು ಹಾಗೂ ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
ಗೆ ಣಿಕೊಪ್ಪ ಕಡೆಯಿಂದ ವೀರಾಜ ಪೇಟೆಗೆ ಬರುತ್ತಿದ್ದ ನಂ ಕೆ.ಎ.19 ಬಿ ಲಕ್ಷ್ಮೀ ಗಣೇಶ್ ಬಸ್ ಹಾಗೂ ವೀರಾಜಪೇಟೆ ಕಡೆಯಿಂದ ಗೋಣಿಕೊಪ್ಪಕ್ಕೆ ಹೋಗುತ್ತಿದ್ದ ಕೆ-ಎಲ್-13-5848 ನ ಆಲ್ಟೋ ಕಾರಿನ ನಡುವೆ ಮುಖಾ ಮುಖಿ ಢಿಕ್ಕಿ ಸಂಭವಿಸಿದೆ. ವಾಹನಗಳ ಮುಖಾಮುಖಿ ಢಿಕ್ಕಿಯ ಪರಿಣಾಮವಾಗಿ ಕಾರಿನ ಮುಂಭಾಗ ಹಿಂದಿನ ಭಾಗ ಪೂರ್ಣ ಜಖಂಗೊಂಡಿದೆ. ಕಾರಿನಲ್ಲಿ ಚಾಲಕ ಮಕ್ಕಳು ಸೇರಿದಂತೆ ಒಟ್ಟು 7ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಚಾಲಕ ಸಿದ್ಧಿಕ್, ಮಕ್ಕಳಾದ ಮದೀನ(8) ಹಸೇನ್(12) ಮೂರು ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಚಿಕಿತ್ಸೆಗಾಗಿ ಮೈಸೂರಿಗೆ ಸಾಗಿಸಲಾಗಿದೆ. ಕಾರಿನಲ್ಲಿದ್ದ ರಶೀದ್, ಲತೀ
್ ಹಾಗೂ ಸಿರಾಜ್ ಹಾಗೂ ತಾಜ್(10)ರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೇಗವಾಗಿ ಬಂದ ಕಾರು ಬಸ್‌ನ ಮುಂದಿನ ಭಾಗಕ್ಕೆ ಅಪ್ಪಳಿಸಿದ ರಭಸಕ್ಕೆ ನಜ್ಜು ಗುಜ್ಜುಗೊಂಡಿದ್ದು, ನಾಲ್ಕು ಮಂದಿ ಆಶ್ಚರ್ಯ ಕರ ರೀತಿಯಲ್ಲಿ ಬದುಕುಳಿದಿದ್ದಾರೆ. ಗ್ರಾಮಾಂತರ ಪೊಲೀಸರು ಬಸ್ ಚಾಲಕ ಬೋಜ ನೀಡಿದ ದೂರಿನ ಮೇರೆಗೆ ಕಾರಿನ ಚಾಲಕ ಸಿದ್ಧಿಕ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.







