ಅಮೆರಿಕ, ಜಪಾನ್, ಕೊರಿಯದಿಂದ ಉ. ಕೊರಿಯ ಕ್ಷಿಪಣಿ ನಿಗ್ರಹ ಅಭ್ಯಾಸ
ವಾಶಿಂಗ್ಟನ್, ಜೂ. 29: ದಕ್ಷಿಣ ಕೊರಿಯ, ಜಪಾನ್ ಮತ್ತು ಅಮೆರಿಕಗಳು ಮಂಗಳವಾರ ಅಭೂತಪೂರ್ವ ತ್ರಿಪಕ್ಷೀಯ ಕ್ಷಿಪಣಿ ರಕ್ಷಣಾ ಅಭ್ಯಾಸವೊಂದನ್ನು ನಡೆಸಿದವು. ಪರಮಾಣು ಶಕ್ತ ಉತ್ತರ ಕೊರಿಯದ ಹೆಚ್ಚುತ್ತಿರುವ ಬೆದರಿಕೆಯನ್ನು ಎದುರಿಸುವ ಉದ್ದೇಶದಿಂದ ಈ ಕಸರತ್ತನ್ನು ನಡೆಸಲಾಗುತ್ತಿದೆ.
""Q ಉತ್ತರ ಕೊರಿಯವು ಹೊಸ ಹಾಗೂ ಶಕ್ತಿಶಾಲಿ ಮಧ್ಯಮ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಯ ಹಾರಾಟ ಪರೀಕ್ಷೆ ನಡೆಸಿದ ಒಂದು ವಾರದ ಬಳಿಕ ಹವಾಯಿ ಸಮುದ್ರದಲ್ಲಿ ಈ ಅಭ್ಯಾಸ ನಡೆಯುತ್ತಿದೆ.್ಷಪಣಿಯ ಪ್ರಾಯೋಗಿಕ ಹಾರಾಟವು ಪೆಸಿಫಿಕ್ ಸಮುದ್ರದಲ್ಲಿರುವ ಅಮೆರಿಕದ ಸೇನಾ ನೆಲೆಗಳಿಗೆ ಬೆದರಿಕೆಯಾಗಿದೆ ಎಂದು ಉತ್ತರ ಕೊರಿಯ ಹೇಳಿತ್ತು.ಭ್ಯಾಸದ ವೇಳೆ, ಅಮೆರಿಕ ಮತ್ತು ಅದರ ಏಶ್ಯದ ಮಿತ್ರ ದೇಶಗಳು ಬಳಸುವ ಏಜಿಸ್ ಕ್ಷಿಪಣಿ ನಿಗ್ರಹ ವ್ಯವಸ್ಥೆಗಳನ್ನು ಪರೀಕ್ಷಿಸುವ ಕಸರತ್ತುಗಳನ್ನು ನಡೆಸಲಾಯಿತು.್ಷಪಣಿಗಳನ್ನು ಹಾರಿಸಲಾಗಿಲ್ಲವಾದರೂ, ಅಭ್ಯಾಸದಲ್ಲಿ ಭಾಗವಹಿಸಿದ ದೇಶಗಳು ತಮ್ಮ ಕಾರ್ಯಾಚರಣೆ ಸಾಮರ್ಥ್ಯ, ಸಂಪರ್ಕ ಸಾಮರ್ಥ್ಯ, ಮಾಹಿತಿ ಸಂಗ್ರಹ ಸಾಮರ್ಥ್ಯಗಳನ್ನು ಬಲಪಡಿಸಿಕೊಂಡವು’’ ಎಂದು ಹೇಳಿಕೆಯೊಂದರಲ್ಲಿ ಅಮೆರಿಕ ಪೆಸಿಫಿಕ್ ಕಮಾಂಡ್ ತಿಳಿಸಿದೆ.





