ರಶ್ಯ, ಟರ್ಕಿ ಅಧ್ಯಕ್ಷರ ನಡುವೆ ಮಾತುಕತೆ
ಮಾಸ್ಕೊ, ಜೂ. 29: ಕಳೆದ ವರ್ಷ ಸಿರಿಯದ ಆಗಸದಲ್ಲಿ ರಶ್ಯದ ಯುದ್ಧ ವಿಮಾನವೊಂದನ್ನು ಟರ್ಕಿ ಹೊಡೆದುರುಳಿಸಿದ ಬಳಿಕ ಮೊದಲ ಬಾರಿಗೆ ಉಭಯ ದೇಶಗಳ ಮುಖ್ಯಸ್ಥರು ಇಂದು ಫೋನ್‌ನಲ್ಲಿ ಸಂಭಾಷಣೆ ನಡೆಸಿದರು ಎಂದು ಕ್ರೆಮ್ಲಿನ್ ಹೇಳಿದೆ. ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಫೋನ್‌ನಲ್ಲಿ ಮಾತನಾಡಿದರು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಸುದ್ದಿಗಾರರಿಗೆ ತಿಳಿಸಿದರು. ವಿಮಾನ ಹೊಡೆದುರುಳಿಸಿದ ಬಳಿಕ ಹಳಸಿದ ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತೆ ಹಳಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ.
Next Story





