Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮಾವು ಬಿತ್ತಿ ಬೇವು ಬೆಳೆಯುವ ಅಲ್ಫೋನ್ಸೊ...

ಮಾವು ಬಿತ್ತಿ ಬೇವು ಬೆಳೆಯುವ ಅಲ್ಫೋನ್ಸೊ ರೈತರು

ಸೋಪನ್ ಜೋಶಿಸೋಪನ್ ಜೋಶಿ29 Jun 2016 11:56 PM IST
share
ಮಾವು ಬಿತ್ತಿ ಬೇವು ಬೆಳೆಯುವ ಅಲ್ಫೋನ್ಸೊ ರೈತರು

‘‘ಇಬ್ಬನಿ ಬಿದ್ದಿಲ್ಲ ಎಂದಾದರೆ, ಉತ್ತರ ನದಿತೀರದ ಚಳಿಗಾಲದ ಚಳಿ ಮಾವಿಗೆ ತಟ್ಟುತ್ತದೆ. 2015ರಲ್ಲಿ ಮಾವಿನ ಬೆಳೆ ತೀವ್ರ ಚಳಿಯಿಂದ ಹಾನಿಗೀಡಾಗಿತ್ತು. ಈ ವರ್ಷ ಚಳಿ ಕಡಿಮೆ ಇದ್ದ ಕಾರಣ ಉತ್ತಮವಾಗಿ ಹೂಬಿಟ್ಟಿದೆ. ಮಾವಿನಕಾಯಿ ಕಾಳುಗಟ್ಟುವ ಕ್ರಿಯೆಯೂ ಉತ್ತಮವಾಗಿತ್ತು. ಆದರೆ ಫೆಬ್ರವರಿಯಲ್ಲಿ ಬಂದ ಭಾರೀ ಪ್ರಮಾಣದ ಅಕಾಲಿಕ ಮಳೆ ಹಾಗೂ ಗಾಳಿಯನ್ನು ಕಳೆದ ಕೆಲ ವರ್ಷಗಳಲ್ಲಿ ಕಂಡೇ ಇರಲಿಲ್ಲ. ಹಲವು ಕಾಯಿಗಳು ಹಣ್ಣಾಗುವ ಮುನ್ನವೇ ಮರದಿಂದ ಬಿದ್ದವು. ಕೆ.ಜಿ.ಗೆ 20 ರಿಂದ 30 ರೂಪಾಯಿ ದರದಲ್ಲಿ ಮಾರಾಟವಾಗಬೇಕಿದ್ದ ಮಾವು ಕೇವಲ 2 ರಿಂದ 3 ರೂಪಾಯಿಗೆ ಬಿಕರಿಯಾಯಿತು’’ ಎಂದು ಅಲಿ ಹೇಳುತ್ತಾರೆ.

ಗುಣಮಟ್ಟ ಕೊರತೆ
ಬೆಂಗಳೂರಿನಲ್ಲಿ ತಮ್ಮ ಕುಟುಂಬ ನಿರ್ವಹಿಸುವ ತಾಸಾ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ಗಾಗಿ ಮಾವು ಖರೀದಿಸಲು ಶಾದಬ್ ಹುಸೈನ್ ಬೇರೆ ಬೇರೆ ಮಾರುಕಟ್ಟೆಗಳಿಗೆ ಹೋಗುತ್ತಿರುತ್ತಾರೆ. ಮಾವಿನಹಣ್ಣಿನ ಪಲ್ಪ್‌ಹಾಗೂ ರಸವನ್ನು ಸರಬರಾಜು ಮಾಡುವ ದೇಶದ ಅತಿದೊಡ್ಡ ಕಂಪೆನಿಗಳಲ್ಲಿ ಇದೂ ಒಂದು. ‘‘ಈ ಬಾರಿ ಅಧಿಕ ದರ ಇದ್ದ ಕಾರಣ ರಫ್ತುದಾರರ ಲಾಭ ಗಣನೀಯವಾಗಿ ಕುಸಿದಿದೆ. ಅಷ್ಟು ಬೆಲೆಗೆ ತಕ್ಕಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಲ್ಪ್‌ಗೆ ಬೇಡಿಕೆ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಗುಣಮಟ್ಟದ ಹಣ್ಣುಗಳ ಕೊರತೆ ಎದ್ದುಕಾಣುತ್ತಿತ್ತು. ಅಧಿಕ ಮಳೆ ಬಂದ ತಕ್ಷಣ ಮಾವಿನಲ್ಲಿ ನೀರಿನ ಅಂಶ ಅಧಿಕವಾಗಿರುತ್ತದೆ ಮತ್ತು ಸಿಹಿ ಅಂಶ ಕಡಿಮೆಯಾಗುತ್ತದೆ. ಇವು ಪಲ್ಪಿಂಗ್ ಘಟಕಗಳಿಗೆ ಒಳ್ಳೆಯ ಹಣ್ಣುಗಳಲ್ಲ’’ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ಗುಜರಾತ್ ಮಾವಿನಹಣ್ಣು ಉತ್ಪಾದಕ ರಾಜ್ಯವಾಗಿ ರೂಪುಗೊಳ್ಳುತ್ತಿದೆ. ವಾಶಿ ಮಾರುಕಟ್ಟೆ ಮಾವಿನಹಣ್ಣು ರಫ್ತಿನ ಪ್ರಮುಖ ಕೇಂದ್ರ. ಗುಣಮಟ್ಟದ ಹಣ್ಣುಗಳನ್ನು ಖರೀದಿಸುವ ದೊಡ್ಡ ವ್ಯಾಪಾರಿಗಳಿಂದ ರಫ್ತುದಾರರು ಭಾರೀ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ. ಆದರೆ ಈ ಬೇಸಿಗೆಯಲ್ಲಿ ವ್ಯಾಪಾರಿಗಳಿಂದ ವ್ಯಾಪಾರಿಗಳ ಬಳಿಗೆ ರಫ್ತುದಾರರು ಗುಣಮಟ್ಟದ ಹಣ್ಣುಗಳಿಗಾಗಿ ಅಲೆದಾಡುವ ಪರಿಸ್ಥಿತಿ ಇತ್ತು. ವಿದೇಶಿ ಪಾಲುದಾರರ ಬೇಡಿಕೆಯನ್ನು ಪೂರೈಸಲು ಗುಣಮಟ್ಟದ ಹಣ್ಣು ಅಗತ್ಯ. ಈ ಕಾರಣಕ್ಕಾಗಿ ರಫ್ತ್ತುದಾರರು ಮಾರುಕಟ್ಟೆಯಲ್ಲಿ ಗುಣಮಟ್ಟದ ಹಣ್ಣಿಗೆ ಅಲೆದಾಡುವಂತಾಯಿತು.

ಮಾರುಕಟ್ಟೆಯಲ್ಲಿ ಇಂಥ ಗುಣಮಟ್ಟದ ವ್ಯತ್ಯಯ ಮತ್ತು ಸಕಾಲಿಕ ಸರಬರಾಜು ಕೊರತೆಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳಿವೆ. ಆದರೆ ಈ ಕ್ರಮಗಳು ಸದಾ ಒಳ್ಳೆಯ ಕ್ರಮಗಳಾಗಿರುವುದಿಲ್ಲ. ಬೆಳೆಗಾರರು ನಮಗೆ ಹಣ್ಣಾಗದ ಮಾವಿನಕಾಯಿಗಳನ್ನು ಕಳುಹಿಸುತ್ತಾರೆ. ಅವರು ಹಣ್ಣಾಗುವವರೆಗೆ ಕಾಯುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದು ವಾಶಿಯ ವ್ಯಾಪಾರಿಯೊಬ್ಬರು ಹೇಳುತ್ತಾರೆ. ಇದು ಗುಣಮಟ್ಟದ ಉತ್ಪನ್ನ ಅಲ್ಲ ಎನ್ನುವುದು ಚಿಲ್ಲರೆ ಮಾರಾಟಗಾರರಿಗೆ ತಿಳಿದಿರುತ್ತದೆ. ಆದ್ದರಿಂದ ಅವರು ಕ್ಯಾಲ್ಸಿಯಂ ಕಾರ್ಬೈಡ್ ಸಹಾಯದಿಂದ ಅದನ್ನು ಮಾಗುವಂತೆ ಮಾಡುತ್ತಾರೆ. ಆದರೆ ವಾಸ್ತವವಾಗಿ ಇದು ಸುರಕ್ಷತಾ ಕಳಕಳಿಯ ಹಿನ್ನೆಲೆಯಲ್ಲಿ ನಿಷೇಧಿಸಲ್ಪಟ್ಟ ರಾಸಾಯನಿಕ. ಮಾಗುವ ಚೇಂಬರ್‌ನಲ್ಲಿ ಸಹಜವಾಗಿಯೇ ಹಣ್ಣಾಗುವಷ್ಟು ಕಾಯುವ ಸ್ಥಿತಿಯಲ್ಲಿ ವ್ಯಾಪಾರಿಗಳು ಇರುವುದಿಲ್ಲ. ಮಾರಾಟಕ್ಕೆ ಬೇಕಾದಂತೆ ದಾಸ್ತಾನು ನಿಯಂತ್ರಿಸಲು ಕ್ಯಾಲ್ಸಿಯಂ ಕಾರ್ಬೈಡ್ ಉಪಯೋಗಕ್ಕೆ ಬರುತ್ತದೆ ಎಂದು ವಿವರಿಸುತ್ತಾರೆ.
ಹೆಚ್ಚುತ್ತಿರುವ ಅನಿಶ್ಚಿತತೆ ನಡುವೆಯೂ ನಿರಂತರ ಹಾಗೂ ಸಕಾಲಿಕ ಬೆಳೆ ಪಡೆಯಲು ಹಲವು ಮಾರ್ಗೋಪಾಯಗಳನ್ನು ಆಲ್ಫೋನ್ಸೊ ಬೆಳೆಗಾರರು ಕೈಗೊಳ್ಳುತ್ತಾರೆ. ಬಹಳಷ್ಟು ರೈತರು ಬೆಳವಣಿಗೆ ಹಾರ್ಮೋನ್ ನಿಯಂತ್ರಿಸುವ ಪ್ಯಾಕ್ಲೊಬಟರ್‌ರೆಲ್ ಎಂಬ ರಾಸಾಯನಿಕ ಬಳಸುತ್ತಾರೆ. ಇದು ಮರದ ಸಹಜ ಬೆಳವಣಿಗೆಯನ್ನು ತಡೆಯುತ್ತದೆ. ಜತೆಗೆ ಹೂಬಿಡಲು ಹಾಗೂ ಕಾಯಿಕಟ್ಟಲು ಅನುಕೂಲಕರವಾದ ಅಂಶಗಳನ್ನು ಉದ್ದೀಪಿಸುತ್ತದೆ. ಇದನ್ನು ಜಾಗರೂಕವಾಗಿ ಹಾಗೂ ವಿರಳವಾಗಿ ಬಳಸಿದರೆ ನಿಜಕ್ಕೂ ಇದು ಪ್ರಯೋಜನಕಾರಿ. ಆದರೆ ಇದನ್ನು ಎಚ್ಚರಿಕೆಯಿಂದ ಬಳಸುವ ರೈತರು ವಿರಳ. ‘‘ನಾನು ಕೂಡಾ ಇದನ್ನು ಕೆಲ ಮರಗಳಲ್ಲಿ ಪ್ರಯೋಗಿಸಿದೆ. ಆದರೆ ಮರಗಳು ಕೃಶ ಹಾಗೂ ಅನಾರೋಗ್ಯಕರವಾಗುತ್ತವೆ. ಆ ಬಳಿಕ ನಾನೆಂದೂ ಅದನ್ನು ಬಳಸಿಲ್ಲ. ನನ್ನ ಉತ್ಪನ್ನಗಳ ಲೇಬಲ್‌ಗಳಲ್ಲಿ ಪ್ಯಾಕ್ಲೊಬಟರ್‌ರೆಲ್ ಬಳಸಿಲ್ಲ ಎನ್ನುವುದನ್ನು ಸ್ಪಷ್ಟವಾಗಿ ನಮೂದಿಸುತ್ತೇನೆ’’ ಎಂದು ಭಿಡೆ ಹೇಳುತ್ತಾರೆ.
ಮಾವಿನ ತಳಿಗಳನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲ ಗ್ರಾಹಕರು ಇತ್ತೀಚಿನ ದಿನಗಳಲ್ಲಿ ಗುಣಮಟ್ಟದ ಉತ್ಪನ್ನ ಮಾರುಕಟ್ಟೆಗೆ ಬರುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಹವಾಮಾನ ಬದಲಾವಣೆಯ ಪರಿಣಾಮವನ್ನು ಅಂದಾಜು ಮಾಡುವಂತಿಲ್ಲ. ದೊಡ್ಡ ಪರಿಣಾಮವೆಂದರೆ ಅನಿಶ್ಚಿತತೆ. ಇದು ಭಾರತದ ಜನಪ್ರಿಯ ಹಣ್ಣಿಗೆ ಹಲವು ವಿಧದಲ್ಲಿ ಹಾನಿ ಮಾಡುತ್ತಿದೆ. ಬೆಳೆಗಾರರು ಹಾಗೂ ವ್ಯಾಪಾರಿಗಳು ಇದಕ್ಕೆ ತಕ್ಕುದಾದ ಮಾರ್ಪಾಡು ಮಾಡಿಕೊಳ್ಳುತ್ತಾರೆ. ಆದರೆ ಇದರ ಅಂತಿಮ ಪರಿಣಾಮವೆಂದರೆ ಭಾರತದ ಅತ್ಯಂತ ರುಚಿಕರ ತಳಿ ಬೆಲೆ ತೆರಬೇಕಾಗಿರುವುದು.
ಕೃಪೆ: thewire.in

share
ಸೋಪನ್ ಜೋಶಿ
ಸೋಪನ್ ಜೋಶಿ
Next Story
X