ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ವತಿಯಿಂದ ಇಫ್ತಾರ್ ಕೂಟ

ಮುಡಿಪು, ಜೂ.29: ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ವತಿಯಿಂದ ಬದರ್ ಮೌಲಿದ್ ಹಾಗೂ ಇಫ್ತಾರ್ ಕೂಟ ಇತ್ತೀಚೆಗೆ ಸೆಕ್ಟರ್ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಸದಸ್ಯಅಶ್ರಫ್ ಸಅದಿ ಪಡಿಕ್ಕಲ್ ವಹಿಸಿದ್ದರು.
ಆಸಿಫ್ ಸಖಾಫಿ ಅಲ್ ಅಝ್ಹರಿ ಶಿವಮೊಗ್ಗ ರಮಝಾನ್ ತರಗತಿ ನಡೆಸಿಕೊಟ್ಟರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಜಮಾಲುದ್ದಿನ್ ಸಖಾಫಿ ಬದರ್ ಮೌಲೂದ್ ನೇತೃತ್ವ ವಹಿಸಿದ್ದರು.
ವೇದಿಕೆಯಲ್ಲಿ ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮಾಸ್ಟರ್, ಸೆಕ್ಟರ್ ಕೋಶಾಧಿಕಾರಿ ಅಝೀಝ್ ಎಚ್.ಕಲ್, ಜೊತೆ ಕಾರ್ಯದರ್ಶಿ ರಫೀಕ್ ಬಾಳೆಪುಣಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಜೊತೆ ಕಾರ್ಯದರ್ಶಿ ಶರೀಫ್ ಮುಡಿಪು ಉಪಸ್ಥಿತರಿದ್ದರು. ಜಮಾಲುದ್ದಿನ್ ಸಖಾಫಿ ವಂದಿಸಿದರು. ಕಾರ್ಯದರ್ಶಿ ಇಕ್ಬಾಲ್ ಎಂ. ಕಾರ್ಯಕ್ರಮ ನಿರೂಪಿಸಿದರು.
Next Story





