ಐಸಿಸ್ ನಂಟು ಶಂಕೆ: 11 ಜನರ ಬಂಧನ
ಹೈದರಾಬಾದ್,ಜೂ.29: ಟೆಕ್ಕಿ ಹಾಗೂ ಕೆಲವು ಪದವೀಧರರು ಸೇರಿದಂತೆ ಕುಖ್ಯಾತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾದ 11 ಜನರ ಯುವಕರನ್ನು ಹೈದರಾಬಾದ್‌ನಲ್ಲಿ ಬಂಧಿಸಿರುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ ತಿಳಿಸಿದೆ. ಹಳೆನಗರ ಪ್ರದೇಶದ ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಿದ ಬಳಿಕ ಆರೋಪಿಗಳನ್ನು ಬಂಧಿಸಿರುವುದಾಗಿ ಅದು ಹೇಳಿದೆ.
ಬಂಧಿತರಿಂದ ಶಸ್ತ್ರಾಸ್ತ್ರಗಳು, ಯೂರಿಯಾ, ಆ್ಯಸಿಡ್, ರಾಸಾಯನಿಕಗಳು, ಇಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಹಾಗೂ ಪ್ರಚೋದನಕಾರಿ ಸಾಹಿತ್ಯ ಸಾಮಗ್ರಿಗಳು ಹಾಗೂ 15 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಎನ್‌ಐಎ ಹಾಗೂ ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ. ಈ ಯುವಕರು ಐಸಿಸ್‌ಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.
Next Story





