ಮೂಡುಬಿದಿರೆ, ಜೂ.29: ಮಂಗಳ ವಾರ ಸಂಜೆ ಸುರಿದ ಗಾಳಿ ಮಳೆಯಿಂದ ಇಲ್ಲಿನ ಪುತ್ತಿಗೆ ಗ್ರಾಪಂ ವ್ಯಾಪ್ತಿಯ ಹಂಡೇಲು, ಕಾಪಿಕಾಡಿನ ನಿವಾಸಿ ರೇಖಾ ಕುಲಾಲ್‌ರ ಮನೆಯು ಭಾಗಶಃ ಕುಸಿದು ಹಾನಿಗೊಳಗಾಗಿದೆ. ಮನೆಯ ಮೇಲ್ಛಾವಣಿಯ ಮರದ ಪಕ್ಕಾಸು ಮುರಿದು, ಹೆಂಚುಗಳು ಧರೆಗುರುಳಿದ್ದು, 25 ಸಾವಿರ ರೂ.ಗಳಷ್ಟು ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.