ಕುಂಬಳೆ: ಗಾಳಿಮಳೆಗೆ ಕುಸಿದ ಶಾಲೆಯ ಛಾವಣಿ

ಕಾಸರಗೋಡು, ಜೂ.29: ಭಾರೀ ಗಾಳಿ-ಮಳೆಗೆ ಕುಂಬಳೆಯಲ್ಲಿ ಶಾಲೆ ಯೊಂದರ ಛಾವಣಿ ಕುಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಶಾಲೆಗೆ ರಜೆ ಯಿದ್ದುದರಿಂದ ಸಂಭಾವ್ಯ ದುರಂತ ತಪ್ಪಿದೆ.
ಕುಂಬಳೆ ಪೇರಾಲುವಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 3ನೆ ತರಗತಿ ಯವರೆಗೆ ಕಾರ್ಯಾಚರಿಸುತ್ತಿದ್ದ ಕೊಠಡಿಯ ಛಾವಣಿ ಗೋಡೆ ಸಹಿತ ಕುಸಿದು ಬಿದ್ದಿದೆ. ಮಳೆಯ ಕಾರಣ ಶಾಲೆ ಗಳಿಗೆ ರಜೆ ಘೋಷಿಸಿದ್ದರಿಂದ ಪ್ರಾಣಹಾನಿ ಯಾಗುವುದು ತಪ್ಪಿದೆ.
Next Story





