ಡ್ರಾವರ್ ಬಿದ್ದು 6 ಮಕ್ಕಳು ಬಲಿ : 3 ಕೋಟಿ ಡ್ರಾವರುಗಳನ್ನು ಹಿಂಪಡೆದ ಐಕಿಯ
.jpg)
ಪೀಠೋಪಕರಣವು ಬಿದ್ದು ಆರು ಮಕ್ಕಳು ಸಾವಿಗೀಡಾದ ಮೇಲೆ ಐಕಿಯ ಸುಮಾರು 3 ಕೋಟಿ ಡ್ರಾವರುಗಳು ಮತ್ತು ಡ್ರೆಸ್ಸಿಂಗ್ ಮೇಜುಗಳನ್ನು ಹಿಂಪಡೆದುಕೊಳ್ಳುತ್ತಿದೆ.
ಎಲ್ಲಾ ಡ್ರಾವರುಗಳು ಮತ್ತು ಡ್ರೆಸ್ಸರುಗಳು ಬೀಳದಂತೆ ತಡೆಯಲು ಅವುಗಳನ್ನು ಗೋಡೆಗೆ ಅಳವಡಿಸಿಕೊಳ್ಳಬೇಕು. ಹೀಗೆ ಗೋಡೆಗೆ ಅಳವಡಿಸಲಾಗದ ಡ್ರಾವರ್ ಅಥವಾ ಡ್ರೆಸ್ಸರುಗಳನ್ನು ಯಾರಾದರೂ ಹೊಂದಿದ್ದರೆ ಅವುಗಳು ಮಕ್ಕಳ ಕೈಗೆ ಸಿಗದಂತೆ ಮಾಡಬೇಕು ಎಂದೂ ಐಕಿಯ ಹೇಳಿದೆ. ಡ್ರಾವರು ಮತ್ತು ಡ್ರೆಸ್ಸರುಗಳನ್ನು ಅಳವಡಿಸಲು ಐಕಿಯ ಉಚಿತ ಕಿಟ್ ಕೊಡುತ್ತಿದೆ. ಗ್ರಾಹಕರು ಐಕಿಯ ಬಳಿ ಮರುಪಾವತಿಯನ್ನೂ ಕೇಳಬಹುದು. 3 ವರ್ಷದ ಅಥವಾ ಅದಕ್ಕಿಂತ ಚಿಕ್ಕವರಾದ ಕನಿಷ್ಠ 6 ಮಕ್ಕಳು ಐಕಿಯ ಡ್ರಾವರು ಅಥವಾ ಡ್ರೆಸರ್ ಮೇಲೆ ಬಿದ್ದ ಕಾರಣ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಮೆರಿಕದ ಗ್ರಾಹಕ ರಕ್ಷಣೆ ಸುರಕ್ಷಾ ಸಮಿತಿ ಹೇಳಿದೆ.
ಕೃಪೆ: http://khaleejtimes.com/
Next Story





