ಮುಂಬೈನ ಮೆಡಿಕಲ್ ಸ್ಟೋರ್ನಲ್ಲಿ ಅಗ್ನಿ ಆಕಸ್ಮಿಕ ; 8 ಸಾವು
![ಮುಂಬೈನ ಮೆಡಿಕಲ್ ಸ್ಟೋರ್ನಲ್ಲಿ ಅಗ್ನಿ ಆಕಸ್ಮಿಕ ; 8 ಸಾವು ಮುಂಬೈನ ಮೆಡಿಕಲ್ ಸ್ಟೋರ್ನಲ್ಲಿ ಅಗ್ನಿ ಆಕಸ್ಮಿಕ ; 8 ಸಾವು](https://www.varthabharati.in/sites/default/files/images/articles/2016/06/30/jk.jpg)
ಮುಂಬೈ ಜೂ. 30: ಅಂಧೇರಿಯ ವೈರ್ಲೆಸ್ ರೋಡ್ನ ’ವಫಾ ’ ಮೆಡಿಕಲ್ ಸ್ಟೋರ್ ಒಂದರಲ್ಲಿ ಅಗ್ನಿ ಆಕಸ್ಮಿಕದಿಂದಾಗಿ ಎಂಟು ಮಂದಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಜೂಹಿ ಗಲಿಯ ಕಟ್ಟಡದ ಮೊದಲ ಅಂತಸ್ತಿನಲ್ಲಿ ’ವಫಾ ’ ಮೆಡಿಕಲ್ ಮೆಡಿಕಲ್ ಸ್ಟೋರ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು.ಬಳಿಕ ವ್ಯಾಪಿಸಿತು. ಕಟ್ಟಡದಲ್ಲಿ ನೆಲೆಸಿದ್ದವರ ಪೈಕಿ ಮೂರು ತಿಂಗಳ ಮಗು, ಐದು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವಿಗೀಡಾದರು ಎಂದು ಪೊಲೀಸರು ತಿಳಿಸಿದ್ದಾರೆ. ಮೆಡಿಕಲ್ ಸ್ಟೋರ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮವಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
Next Story