13ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಮಧ್ಯವಯಸ್ಕನಿಗೆ ಎರಡು ಜೀವಾವಧಿಶಿಕ್ಷೆ
ಮಂಚೇರಿ, ಜೂನ್ 30: ಹದಿಮೂರು ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಎರಡು ಜೀವಾವಧಿ ಶಿಕ್ಷೆಯನ್ನು ವಿಧಿಸಿ ಮಂಜೇರಿ ಜಿಲ್ಲಾ ಅಡಿಷನಲ್ ಸೆಶನ್ಸ್ ನ್ಯಾಯಾಧೀಶ ಕೆ.ಪಿ. ಸುಧೀರ್ ತೀರ್ಪು ನೀಡಿದ್ದಾರೆ. ಮಂಜೇರಿ ವೋಟ್ಟಕ್ಕಾಡ್ ಪುಲ್ಲಾಂಚೇರಿಯ ಕುಯಿಯಂಙಲ್ ಮಧು(40)ಶಿಕ್ಷೆಗೊಳಗಾದ ಆರೋಪಿಯಾಗಿದ್ದಾರೆ.
ಐಪಿಸಿ 376, ಜೀವಾವಧಿ ಶಿಕ್ಷೆ, ಮತ್ತುಹತ್ತು ಸಾವಿರ ರೂಪಾಯಿ ದಂಡ. ದಂಡ ಪಾವತಿಸದಿದ್ದರೆ ಆರು ತಿಂಗಳು ಹೆಚ್ಚುವರಿ ಶಿಕ್ಷೆ,ಇದಲ್ಲದೆ ಮಕ್ಕಳ, ಮಹಿಳೆಯರ ವಿರುದ್ಧ ಲೈಂಗಿಕಾತಿ ಕ್ರಮಣ ತಡೆ ಕಾನೂನು ಪ್ರಕಾರ ವಿವಿಧ ಸೆಕ್ಷನ್ಗಳ ಅನ್ವಯ ಜೀವಾವಧಿ ಶಿಕ್ಷೆ ಮತ್ತು ಹತ್ತು ಸಾವಿರ ರೂಪಾಯಿ ದಂಡ,ದಂಡ ಪಾವತಿಸದಿದ್ದರೆ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ. ಕಿರುಕುಳಕ್ಕೊಳಗಾದ ಬಾಲಕಿಗೆ ಮೂರು ಲಕ್ಷ ರೂಪಾಯಿ ಸರಕಾರ ಪರಿಹಾರ ನೀಡಬೇಕೆಂದು ಕೋರ್ಟು ತೀರ್ಪು ನೀಡಿದೆ.
Next Story