ತಣ್ಣೀರುಬಾವಿ: ನಿಯಂತ್ರಣ ತಪ್ಪಿ ಪೊದೆಗೆ ನುಗ್ಗಿದ ಕಾರು

ಮಂಗಳೂರು, ಜೂ.30: ಅತೀ ವೇಗದಲ್ಲಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಪಕ್ಕದಲ್ಲಿದ್ದ ಪೊದೆಗೆ ನುಗ್ಗಿದ ಘಟನೆ ತಣ್ಣೀರುಬಾವಿ ಬಳಿ ನಡೆದಿದೆ.
ಇಂದು ಮುಂಜಾನೆ ವೇಳೆ ಅತೀ ವೇಗವಾಗಿ ಆಗಮಿಸಿದ ದಿಲ್ಲಿ ನೋಂದಣಿಯ ಕಾರು ಪುಟ್‌ಪಾತ್‌ಗೆ ಢಿಕ್ಕಿ ಹೊಡೆದು ಪಕ್ಕದಲ್ಲಿದ್ದ ಪೊದೆಯೊಂದರಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದು ನಿಂತಿದೆ. ಘಟನೆಯಲ್ಲಿ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ತಣ್ಣೀರುಬಾವಿ ಬೀಚ್‌ಗೆ ಹೋಗುವ ದಾರಿಯಲ್ಲಿರುವ ಎನ್‌ಎಂಪಿಟಿ ಗೆಸ್ಟ್ ಹೌಸ್ ಸನಿಹದಲ್ಲಿ ಈ ಘಟನೆ ನಡೆದಿದೆ.
Next Story





