ಸಜೀಪನಡು: ವಸತಿ ಫಲಾನುಭವಿಗಳಿಗೆ ತರಬೇತಿ ಶಿಬಿರ
.jpg)
ಬಂಟ್ವಾಳ, ಜೂ. 30: ರಾಜೀವ್ ಗಾಂಧಿ ಗ್ರಾಮೀಣ ನಿಗಮ ಹಾಗೂ ಸಜೀಪನಡು ಗ್ರಾಮ ಪಂಚಾಯತ್ ಸಹಯೋಗದಲ್ಲಿ ವಸತಿ ಫಲಾನುಭವಿಗಳಿಗೆ ತರಬೇತಿ ಶಿಬಿರ ಸಜೀಪನಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ರಾಜೀವ್ ಗಾಂಧಿ ಗ್ರಾಮೀಣ ನಿಗಮದ ಅಧಿಕಾರಿ ಜಯರಾಜ್ ವಸತಿ ಫಲಾನುಭವಿಗಳಿಗೆ ತರಬೇತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಜೀಪನಡು ಗ್ರಾಮ ಪಂಚಾಯತ್ ಅಧ್ಯಕ್ಷ ಸಜೀಪ ಮುಹಮ್ಮದ್ ನಾಸೀರ್ ವಹಿಸಿದರು. ಉಪಾಧ್ಯಕ್ಷೆ ಸುನೀತ ಮೊರಾಸ್, ಪಂಚಾಯತ್ ಸದಸ್ಯರಾದ ಸುರೇಶ್ ಬಂಗೇರ, ಬಿ.ಫಾತುಮ, ಮುಮ್ತಾಝ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Next Story





