ಖರ್ಜೂರದಿಂದ ಶರೀರಕ್ಕೆ ಸಿಗುವ ಪ್ರಯೋಜನಗಳು ಯಾವ್ಯಾವು?

ಖರ್ಜೂರದಿಂದ ಶರೀರಕ್ಕೆ ಸಿಗುವ ಪ್ರಯೋಜನಗಳು ಯಾವ್ಯಾವು?
ಮುಂದೆ ಓದಿ.......................
.....................................
ಖರ್ಜೂರದಿಂದ ಆರೋಗ್ಯಕ್ಕಿರುವ ಉಪಯುಕ್ತತೆ ಬಗ್ಗೆ ಕತರ್‌ನಲ್ಲಿ ಸಂಶೋಧನೆ ನಡೆಯುತ್ತಿದ್ದು ಮುಖ್ಯವಾಗಿ ಎರಡು ಜಾತಿಯ ಖರ್ಜೂರಗಳನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಖರ್ಜೂರದ ಕುರಿತು ಈ ಮೊದಲು ಅಧ್ಯಯನ ನಡೆದಿದ್ದು ಅದರಲ್ಲಿ ಪತ್ತೆಮಾಡಿರುವಷ್ಟು ಆರೋಗ್ಯಕ್ಕೆ ಉಪಯುಕ್ತ ಘಟಕಗಳಿವೆ ಎಂದು ಹೊಸದಾಗಿ ಇನ್ನೊಂದು ಸಂಶೋಧನೆ ನಡೆಯುತ್ತಿದೆ.
ಸಂಶೋಧನೆಗೆ ಎರಡು ಜಾತಿಯ ಖರ್ಜೂರಗಳನ್ನು ಪರಿಗಣಿಸಲಾಗಿದೆ. ವೀಲ್‌ಕಾರ್ನರ್ ಮೆಡಿಸಿನ್ ಕತರ್ ಇದರ ತಜ್ಞರು ಖಲಸ್, ದೆಗ್ಲಿತ್ ನೂರ್ ಎಂಬ ಖರ್ಜೂರದ ಎರಡು ಪ್ರಮುಖ ಜಾತಿಗಳನ್ನು ತಮ್ಮ ಸಂಶೋಧನೆಗ ಆಯ್ದುಕೊಂಡಿದ್ದಾರೆ. ಖಲಸ್ ಪ್ರಾಚೀನ ಖರ್ಜೂರವಾಗಿದೆ. ಇದನ್ನು ಖರ್ಜೂರದ ರಾಣಿ ಎನ್ನಲಾಗುತ್ತದೆ. ದೆಗ್ಲೀತ್ ನೂರ್ ಉತ್ತರಾಫ್ರಿಕಾದ ಬಹುಪ್ರಿಯ ಖರ್ಜೂರವಾಗಿದೆ.ಅಲ್‌ಜೀರಿಯ, ಟುನಿಷ್ಯಗಳಲ್ಲಿ ಇದು ಲಭಿಸುತ್ತದೆ.
ಫನುನೋಯಿಡ್ಸ್, ಕರೋಟ್ಟಿನೋಯಿಡ್ಸ್, ಪೊಲಿಹಿನೋಲ್ಡ್ಸ್ ಹಾಗೂ ಸ್ಟಿರಾಯ್ಡಿ ಮುಂತಾದ ಜೈವಿಕ ಘಟಕಗಳು ಖರ್ಜೂರದಲ್ಲಿವೆ.ಇದು ಆರೋಗ್ಯಕ್ಕೆ ತುಂಬ ಉಪಯುಕ್ತವಾಗಿದ್ದು ಒಬ್ಬರು ಖರ್ಜೂರವನ್ನು ತಿಂದರೆ ಆತನ ಶರೀರದಲ್ಲಿ ಈ ಘಟಕಗಳೆಲ್ಲ ಸೇರುತ್ತವೆ ಎಂಬುದು ನಮ್ಮನ್ನು ಚಕಿತಗೊಳಿಸಿವೆ ಎಂದು ಸಂಶೋಧಕರಲ್ಲಿ ಒಬ್ಬರಾದ ಸ್ವೀಟಿ ಮಾಥ್ಯೂ ಹೇಳಿದ್ದಾರೆ.
ಖರ್ಜೂರದಿಂದ ಉಪವಾಸ ತೊರೆಯುವುದು ಉತ್ತಮ ಎಂದು ಹೇಳುವುದು ಇದರಲ್ಲಿ ಅಡಕವಾದ ಪ್ರಕೃತಿದತ್ತವಾದ ಸಕ್ಕರೆಯ ಕಾರಣಕ್ಕಾಗಿದೆ. ಕೊಲೊಸ್ಟ್ರಾಲ್ ಕಡಿಮೆಗೊಳಿಸಲು, ಹೃದ್ರೋಗಗಳನ್ನುಕಡಿಮೆಗೊಳಿಸಲು ಇದರ ಈ ಘಟಕಗಳು ಸಹಾಯಕವಾಗುತ್ತವೆ ಎಂದು ಅವರು ಹೇಳುತ್ತಾರೆ.ಸಂಶೋಧನೆಗೆ ಆಯ್ದುಕೊಳ್ಳಲಾದ ಎರಡು ಜಾತಿಯ ಖರ್ಜೂರಗಳಿಂದ ಮನುಷ್ಯನಿಗೆ ಸಿಗುವ ವಿಟಮಿನ್‌ಗಳು ಮತ್ತು ಮಿನರಲ್ಸ್‌ಗಳ ಕುರಿತು ಹಾಗೂ ಹನ್ನೆರಡು ಗಂಟೆ ಉಪವಾಸ ಹಿಡಿದ ಬಳಿಕ ಖರ್ಜೂರ ತಿನ್ನುವ ಓರ್ವನ ರಕ್ತದಲ್ಲುಂಟಾಗುವ ಜೈವಿಕ ಪರಿಣಾಮಗಳ ಕುರಿತು ಮುಖ್ಯವಾಗಿ ಅಧ್ಯಯನ ನಡೆಸಲಾಗುತ್ತಿದೆ ಎಂದು ಸ್ವೀಟಿ ಥಾಮಸ್ ತಿಳಿಸಿದ್ದಾರೆ.







