ಕಾಬೂಲ್‌ನಲ್ಲಿ ಆತ್ಮಾಹುತಿ ದಾಳಿ; 40ಕ್ಕೂ ಅಧಿಕ ಪೊಲೀಸರು ಬಲಿ

ಕಾಬೂಲ್ , ಜೂ.30: ಪೊಲೀಸರನ್ನು ಕರೆದೊಯ್ಯುತ್ತಿದ್ದ ಬಸ್ನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿ , ಸ್ಪೋಟದಲ್ಲಿ 40ಕ್ಕೂ ಹೆಚ್ಚು ಪೊಲೀಸರು ಮೃತಪಟ್ಟ ಘಟನೆ ಕಾಬೂಲ್‌ನಲ್ಲಿ ಗುರುವಾರ ನಡೆದಿದೆ.
ಮೈದಾನ್ ವರ್ಡಕ್ ಪ್ರಾಂತ್ಯದಿಂದ ಕಾಬೂಲ್ ನಗರಕ್ಕೆ ಬಸ್ ಬರುತ್ತಿದ್ದಾಗ ನಗರದ ಹೊರವಲಯದಲ್ಲಿ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ. ತಾಲಿಬಾನ್ ಉಗ್ರರು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ
Next Story





