ಹೈದರಾಬಾದ್ : ಉಗ್ರರೆಂದು ಬಂಧಿತರಲ್ಲಿ 6 ಅಮಾಯಕರು ಬಿಡುಗಡೆ
ಹೈದರಾಬಾದ್ , ಜೂ. 30: ಭಯೋತ್ಪಾದನೆಯ ಆರೋಪದ ಮೇಲೆ ಬುಧವಾರ ವಶಕ್ಕೆ ಪಡೆದಿದ್ದ 11 ಮಂದಿಯ ಪೈಕಿ 6 ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ( ಎನ್ ಐ ಎ ) ಗುರುವಾರ ಬೆಳಗ್ಗೆ ಬಿಡುಗಡೆ ಮಾಡಿದೆ. ಇಲ್ಲಿನ ಎನ್ ಐ ಎ ಕಚೇರಿಯಲ್ಲಿ ಆರು ಮಂದಿಯ ಮನೆಯವರನ್ನು ಕರೆಸಿ ಅವರನ್ನು ಬಿಡುಗಡೆ ಮಾಡಲಾಗಿದೆ.
ಬಿಡುಗಡೆಯಾದವರನ್ನು ಸಯ್ಯದ್ ನೈಮತುಲ್ಲಾ, ಮುಝಫರ್ ಹುಸೇನ್, ಮೊಹಮ್ಮದ್ ಅತಾವುಲ್ಲಾ, ಅಲ್ ಜೀಲಾನಿ , ಅಝರ್ ಹಾಗೂ ಮೊಹಮ್ಮದ್ ಅರ್ಬಾಜ್ಹ್ ಎಂದು ಗುರುತಿಸಲಾಗಿದೆ. ಇವರು ಯಾವುದೇ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಲು ಹೊರಟವರಲ್ಲ ಎಂದು ಎನ್ ಐ ಎ ಹೇಳಿದೆ.
ಉಳಿದ ಐದು ಮಂದಿಯನ್ನು ಇಂದು ಎನ್ ಐ ಎ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.
Next Story