ಕಾರು-ಆಕ್ಟಿವಾ ಮಧ್ಯೆ ಢಿಕ್ಕಿ: ಸವಾರನಿಗೆ ಗಾಯ

ಕಡಬ, ಜೂ.30: ಕಾರು ಹಾಗೂ ಆಕ್ಟಿವಾ ಸ್ಕೂಟರ್ ನಡುವೆ ಢಿಕ್ಕಿ ಸಂಭವಿಸಿ ಸವಾರ ಗಾಯಗೊಂಡ ಘಟನೆ ಗುರುವಾರ ಸಂಜೆ ಕಡಬ ಪೇಟೆಯಲ್ಲಿ ನಡೆದಿದೆ.
ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ಕಾರು ಪೇಟೆ ತಲುಪಿದಾಗ ಎದುರಿನಿಂದ ಬಂದ ಆಕ್ಟಿವಾಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಗಾಯಗೊಂಡ ಸವಾರನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಕಡಬ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Next Story





