ಕುವೈತ್ ಮನೆಯಲ್ಲಿ ಬೆಂಕಿ: 9 ಏಶ್ಯನ್ನರ ಸಾವು

ಕುವೈತ್ ಸಿಟಿ, ಜೂ. 30: ಕುವೈತ್‌ನ ಮನೆಯೊಂದರಲ್ಲಿ ಗುರುವಾರ ನಡೆದ ಅಗ್ನಿ ಅವಗಢದಲ್ಲಿ ಏಶ್ಯದ ಒಂಬತ್ತು ನಿವಾಸಿಗಳು ಮೃತಪಟ್ಟಿದ್ದಾರೆ ಎಂದು ಕುವೈತ್ ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದರು.
ದುರಂತದಲ್ಲಿ ಮೃತಪಟ್ಟವರ ಪೈಕಿ ಆರು ಮಂದಿ ಒಂದೇ ಕುಟುಂಬದವರು ಎಂದು ಅವರು ಹೇಳಿದರು.
ನಾಲ್ವರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿ ನುಡಿದರು.
ರಾಜಧಾನಿ ಕುವೈತ್ ಸಿಟಿಯ ದಕ್ಷಿಣಕ್ಕೆ 15 ಕಿಲೋಮೀಟರ್ ದೂರದಲ್ಲಿರುವ ಉಪನಗರ ಫರ್ವಾನಿಯದಲ್ಲಿರುವ ಮನೆಯೊಂದರಲ್ಲಿ ಬೆಂಕಿ ದುರಂತ ಸಂಭವಿಸಿದೆ. ಈ ಮನೆಯನ್ನು ಹಲವಾರು ಕಿರು ಮನೆಗಳನ್ನಾಗಿ ವಿಂಗಡಿಸಲಾಗಿತ್ತು.
ಸಂತ್ರಸ್ತರು ಯಾವ ದೇಶದವರು ಎಂಬ ಮಾಹಿತಿಯನ್ನು ಅವರು ನೀಡಿಲ್ಲ.
Next Story





