ಬೆಳ್ತಂಗಡಿ, ಜೂ.30: ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ರೆಂಕೆದಗುತ್ತು ಎಂಬಲ್ಲಿ ಧರೆ ಕುಸಿತಗೊಂಡಿದೆ.
ಇಲ್ಲಿನ ನಿವಾಸಿ ವಿಜಯ ಎಂಬವರ ಮನೆಯ ಹಿಂಭಾಗದ ಧರೆ ಕುಸಿದಿದ್ದು, ಮನೆ ಅಪಾಯದಲ್ಲಿದೆ. ಧರೆಯ ಮೇಲ್ಭಾಗದ ಅಂಚಿನಲ್ಲಿರುವ ತೆಂಗಿನಮರ ಉರುಳಿ ಬೀಳುವ ಹಂತದಲ್ಲಿದೆ.