ಪೆಟ್ರೋಲ್ 89 ಪೈಸೆ, ಡೀಸೆಲ್ 49 ಪೈಸೆ ಇಳಿಕೆ

ಹೊಸದಿಲ್ಲಿ, ಜೂ.30: ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ 89 ಪೈಸೆ ಹಾಗೂ ಡೀಸೆಲ್ ದರ 49 ಪೈಸೆ ಕಡಿಮೆಯಾಗಿದೆ. ನೂತನ ದರಗಳು ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆಯಲ್ಲಿ ತುಸು ಕುಸಿತ ಕಂಡುಬಂದಿರುವ ಹಿನ್ನೆಲೆಯಲ್ಲಿ ತೈಲ ಬೆಲೆ ಇಳಿಕೆಯಾಗಿದೆ ಎನ್ನಲಾಗಿದೆ.
Next Story





