ಇಂದು ಮಸ್ಜಿದುತ್ತಖ್ವಾದಲ್ಲಿ ವಿಶೇಷ ಉಪನ್ಯಾಸ
ಮಂಗಳೂರು, ಜೂ.30: ನಗರದ ಪಂಪ್‌ವೆಲ್‌ನಲ್ಲಿರುವ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಅಧೀನದ ‘ಮಸ್ಜಿದುತ್ತಖ್ವಾ’ದಲ್ಲಿ ಜು.1ರಂದು ಜುಮಾ ನಮಾಝ್ ಬಳಿಕ ಅನಸ್ ಸಿದ್ದೀಕಿ ಸಖಾಫಿ ಶಿರಿಯ ‘ಲೈಲತುಲ್ ಖದ್ರ್’ ಎಂಬ ವಿಷಯದ ಕುರಿತು ರಮಝಾನ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಅಸೈಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಿಲ್ಲೂರು ದುಆಕ್ಕೆ ನೇತೃತ್ವ ನೀಡಲಿದ್ದಾರೆ ಎಂದು ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಅಲ್ಹಾಜ್ ಬಿ.ಎಂ.ಮುಮ್ತಾಝ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





