ಉಪನ್ಯಾಸಕರ ಹುದ್ದೆಗೆ ನಿವೃತ್ತರಿಂದ ಅರ್ಜಿ ಆಹ್ವಾನ
ಉಡುಪಿ, ಜೂ.30: ಕಾರ್ಕಳ-ಮಿಯ್ಯರು ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ 2016-17ನೆ ಸಾಲಿನಲ್ಲಿ ಖಾಲಿ ಇರುವ ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲಿಷ್ ವಿಷಯಗಳ ಉಪನ್ಯಾಸಕರ ಹುದ್ದೆಗೆ ನಿವೃತ್ತ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಉಪನ್ಯಾಸಕರಿಗೆ ಮಾಸಿಕ 7,000 ರೂ. ಗೌರವಧನ ನೀಡಲಾಗು ವುದು. ಕರ್ತವ್ಯದ ಅವಧಿ 2016-17ನೆ ಸಾಲಿಗೆ ಸೀಮಿತ ವಾಗಿದ್ದು, ಆಸಕ್ತರು ತಮ್ಮ ಅರ್ಜಿಯನ್ನು ಜು.5ರೊಳಗೆ ‘ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ಪ.ಪೂ. ವಸತಿ ಕಾಲೇಜು, ಮಿಯ್ಯಾರು ಗ್ರಾಮ, ಕಾರ್ಕಳ ತಾಲೂಕು’ ಇವರಿಗೆ ಸಲ್ಲಿಸುವಂತೆ ಪ್ರಕಟನೆ ತಿಳಿಸಿದೆ.
Next Story





