ಕೆನಡಾ ಓಪನ್ ;ಭಾರತದ ಆಟಗಾರರ ಮೇಲುಗೈಅಜಯ್ ಜಯರಾಂ, ಪ್ರಣೋಯ್ ಮೂರನೆ ಸುತ್ತಿಗೆ

ಕಾಲ್ಗರಿ, ಜೂ.30: ಇಲ್ಲಿ ನಡೆಯುತ್ತಿರುವ dÜಟೂರ್ನಮೆಂಟ್‌ನಲ್ಲಿ ಭಾರತದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅಜಯ್ ಜಯರಾಂ, ಮತ್ತು ಎಚ್‌ಎಸ್ ಪ್ರಣೋಯ್ ಮೂರನೆ ಸುತ್ತು ತಲುಪಿದ್ದಾರೆ.
ಅಗ್ರ ಶ್ರೇಯಾಂಕದ ಅಜಯ್ ಜಯರಾಂ ಅವರು ಕೆನೆಡಾದ ಮಾರ್ಟಿನ್ ಗಿಫ್ರೆ ವಿರುದ್ಧ 12-21, 21-17, 21-13 ಅಂತರದಲ್ಲಿ ಗೆಲುವು ಸಾಧಿಸಿದರು. 54 ನಿಮಿಷಗಳ ಆಟದಲ್ಲಿ ಅವರು ಆಸ್ಟ್ರೀಯಾದ ಡೇವಿಡ್ ಒಬ್ರೆನೊಸ್ಟೇರೆರ್ ಅವರನ್ನು ಎದುರಿಸಲಿದ್ದಾರೆ.
ಎರಡನೆ ಶ್ರೇಯಾಂಕದ ಎಚ್.ಎಸ್.ಪ್ರಣೋಯ್ ಅವರು ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಕಠಿಣ ಹೋರಾಟ ನಡೆಸಿದರು. ಸ್ವೀಡನ್‌ನ ಮ್ಯಾಟಿಸ್ ಬೊರ್ಗ್ ವಿರುದ್ಧ ಪುರುಷರ ಸಿಂಗಲ್ಸ್ ಟೂರ್ನಮೆಂಟ್‌ನಲ್ಲಿ 13-21, 21-11, 21-15 ಅಂತರದಲ್ಲಿ ಜಯ ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಅವರಿಗೆ ಕೆನಡಾದ ಬಿ.ಆರ್.ಸಂಕೀರತ್ ಸವಾಲು ಎದುರಾಗಿದೆ.
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ ಆರ್‌ಎಂವಿ ಗುರುಸಾಯ್ ದತ್ ಅವರು ಸ್ಥಳೀಯ ಆಟಗಾರ ಜೋನಾಥನ್ ಲಾಯ್ ವಿರುದ್ಧ 21-8, 21-6 ಅಂತರದಲ್ಲಿ ಸುಲಭದ ಜಯ ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಅವರು ಎಸ್ಟೋನಿಯಾದ ರಾಹ್ಲು ಮಸ್ಟ್ ಮಸ್ಟ್ ಸವಾಲನ್ನು ಎದುರಿಸಲಿದ್ದಾರೆ.
ನಾಲ್ಕನೆ ಶ್ರೇಯಾಂಕದ ಬಿ ಸಾಯ್ ಪ್ರಣೀತ್ ಅವರು ಚೀನಾ ತೈಫೆಯ ಖಾನ್ ಚಾವೊ ಯು ವಿರುದ್ಧ 26-24, 21-16 ಅಂತರದಲ್ಲಿ ಜಯ ಗಳಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರಿಗೆ ಕೆನಡಾದ ವೆನ್‌ಚಾವೊ ಶಿ ಅವರ ಸವಾಲು ಎದುರಾಗಿದೆ.
ಯುವ ಶಟ್ಲರ್ ಪ್ರತುಲ್ ಜೋಶಿ ಅವರು ಸ್ಕಾಟ್ಲೆಂಡ್‌ನ ಅಲೆಸ್ಟೈರ್ ಕಾಸೆಯ್ ವಿರುದ್ಧ ಜಯ ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಹರ್ಷಲ್ ದಾನಿ ಸವಾಲು ಎದುರಾಗಲಿದೆ
ಮಹಿಳೆಯರ ಸಿಂಗಲ್ಸ್‌ನಲ್ಲಿ 2015ರ ನ್ಯಾಶನಲ್ ಚಾಂಪಿಯನ್ ರತ್ವಿಕಾ ಶಿವಾನಿ ಗಾದ್ರೆ ಸ್ಥಳೀಯ ಆಟಗಾರ್ತಿ ಕೇಲೈಗ್ ಒ’ ಡೊನೊಘ ವಿರುದ್ಧ 21-14, 21-14 ಅಂತರದಲ್ಲಿ ಗೆಲುವಿನ ನಗೆ ಬೀರಿದರು. ಮುಂದಿನ ಪಂದ್ಯದಲ್ಲಿ ಅವರಿಗೆ ಅಸ್ಟ್ರೀಯದ ಎಲಿಸಾಬೆತ್ ಬಾಲ್ಡಾಫ್ ಅವರ ಸವಾಲನ್ನು ಎದುರಿಸಲಿದ್ದಾರೆ.
2016ರ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೆ ಸ್ಥಾನ ಪಡೆದಿದ್ದ ತನ್ವಿ ಲಾಡ್ ಪ್ರೀ ಕ್ವಾರ್ಟರ್ ಫೈನಲ್ ತಲುಪಿದರು. ಡೆನ್ಮಾರ್ಕ್‌ನ ಜೂಲಿ ಫಿನ್ನೆ ಇಪ್ಸೆನ್ ವಿರುದ್ಧ 21-17, 21-10 ಅಂತರದಲ್ಲಿ ಜಯ ಗಳಿಸಿದರು.
ಭಾರತದ ಮಿಶ್ರ ಡಬಲ್ಸ್ ತಾರೆಯರಾದ ಮನು ಅತ್ರಿ ಮತ್ತು ಅಶ್ವಿನಿ ಪೊನ್ನಪ್ಪ ಸ್ಥಳೀಯ ಆಟಗಾರರಾದ ಬ್ರಯಾನ್ ಹೊಲೆಕ್ ಮತ್ತು ಎರಿನ್ ಒ’ ಡೊನೊಘು ವಿರುದ್ಧ 21-13, 21-14 ಅಂತರದಲ್ಲಿ ಜಯ ಸಾಧಿಸಿದರು. ಮುಂದಿನ ಪಂದ್ಯದಲ್ಲಿ ಅವರು ಸ್ಥಳೀಯರಾದ ಜೋನಥನ್ ಲಾಯ್ ಮತ್ತು ಮಿಚೆಲ್ಲೆ ತಾಂಗ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಅವರು ಕೆನಡಾದ ತಿಮೊಟಿ ಚಿಯು ಮತ್ತು ಜೇಸನ್ ಹೊ ಶುವೆ ಅವರನ್ನು ಎದುರಿಸಲಿದ್ದಾರೆ.





