ಅಮೆರಿಕದ ಸೇನಾ ನೆಲೆಯಲ್ಲಿ ‘ಶೂಟರ್’ ಪ್ರಹಸನ
ವಾಶಿಂಗ್ಟನ್, ಜೂ. 30: ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಆ್ಯಂಡ್ರೂಸ್ ಜಂಟಿ ನೆಲೆಯಲ್ಲಿ ಬಂದೂಕುಧಾರಿಯೊಬ್ಬ ಇದ್ದಾನೆ ಎಂಬ ವರದಿಯ ಹಿನ್ನೆಲೆಯಲ್ಲಿ ಗುರುವಾರ ನೆಲೆಯನ್ನು ಮುಚ್ಚಲಾಗಿತ್ತು.
ಆದಾಗ್ಯೂ, ಈ ಪ್ರದೇಶದಲ್ಲಿ ಸಕ್ರಿಯ ಶೂಟರ್ ಪತ್ತೆಯಾಗದ ಹಿನ್ನೆಲೆಯಲ್ಲಿ ಬಳಿಕ ನೆಲೆಯನ್ನು ತೆರೆಯಲಾಯಿತು. ಆ್ಯಂಡ್ರೂಸ್ ಜಂಟಿ ನೆಲೆಯು ಸೇನೆಗೆ ಸೇರಿದ್ದು, ಇಲ್ಲಿ ಅಮೆರಿಕದ ಅಧ್ಯಕ್ಷರ ವಿಮಾನ ಏರ್‌ಫೋರ್ಸ್ ಒನ್ ಇಡಲಾಗುತ್ತದೆ. ನೆಲೆಯು ಶ್ವೇತಭವನದಿಂದ ಸುಮಾರು 15 ಮೈಲಿ ದೂರದಲ್ಲಿದೆ. ‘‘ನೆಲೆಯೊಳಗೆ ಸಕ್ರಿಯ ಬಂದೂಕುಧಾರಿಯನ್ನು ಎದುರಿಸುವ ಕಾರ್ಯಾಚರಣೆ ನಡೆಸಲು ಇಂದು ನಿಗದಿಪಡಿಸಲಾಗಿತ್ತು. ಆದರೆ, ಮಾಲ್ಕಮ್ ಗ್ರೋ ಮೆಡಿಕಲ್ ಫೆಸಿಲಿಟಿಯಲ್ಲಿ ನೈಜ ಬಂದೂಕುಧಾರಿಯಿದ್ದಾನೆ ಎಂಬ ವರದಿಗಳು ಬಂದವು’’ ಎಂದು ನೆಲೆ ತನ್ನ ಫೇಸ್‌ಬುಕ್ ಪುಟದಲ್ಲಿ ಹೇಳಿದೆ.
Next Story





