ಸಲ್ಮಾನ್ ವಿವಾದಿತ ಹೇಳಿಕೆ : ಪ್ರತಿಕ್ರಿಯೆ ನೀಡಿದ ಶಾರುಖ್
ಮುಂಬೈ, ಜು.1 : ಸಲ್ಮಾನ್ ಖಾನ್ ಅವರ ವಿವಾದಿತ " ಅತ್ಯಾಚಾರಕ್ಕೊಳಗಾದ ಮಹಿಳೆ" ಹೋಲಿಕೆಯ ಹೇಳಿಕೆ ಬಗ್ಗೆ ಸೂಪರ್ ಸ್ಟಾರ್ ಶಾರುಖ್ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಹೇಳಿಕೆಗೆ ಸಲ್ಮಾನ್ ಕ್ಷಮೆ ಕೋರಿಲ್ಲ, ಇದು ಸರಿಯೇ ಎಂದು ಪತ್ರಕರ್ತರು ಶಾರುಖ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶಾರುಖ್ , " ಕಳೆದ ಕೆಲವು ವರ್ಷಗಳಲ್ಲಿ ನಾನು ಸ್ವತಃ ಕೆಲವು ತಪ್ಪು ಹೇಳಿಕೆಗಳನ್ನು ನೀಡಿದ್ದೇನೆ. ಹಾಗಾಗಿ ಅವರು ಕ್ಷಮೆ ಯಾಚಿಸಬೇಕೇ ಬೇಡವೇ ಎಂದು ತೀರ್ಪು ನೀಡುವ ಅಧಿಕಾರ ನನಗಿಲ್ಲ. ಅದನ್ನು ಅವರೇ ನಿರ್ಧರಿಸುವುದು ಸರಿ. ಸ್ವತಃ ನಾನೇ ಈ ಹಿಂದೆ ಹೇಳಿಕೆ ನೀಡುವಾಗ ಎಡವಿದ್ದೇನೆ. ಹಾಗಿರುವಾಗ ನಾನು ಆ ಬಗ್ಗೆ ಕಮೆಂಟ್ ಮಾಡುವುದು ಸರಿಯಲ್ಲ " ಎಂದು ಜಾಣ ಉತ್ತರ ನೀಡಿ ಜಾರಿಕೊಂಡಿ ದ್ದಾರೆ ಶಾರುಖ್ .
Next Story