ಬಾಂಗ್ಲಾದಲ್ಲಿ ಹಿಂದೂ ಪುರೋಹಿತನ ಹತ್ಯೆ

ಢಾಕಾ, ಜು.1: ಹಿಂದೂ ಪುರೋಹಿತರೊಬ್ಬರನ್ನು ಕತ್ತಿಯಿಂದ ಕೊಚ್ಚಿ ಕೊಂದು ಹಾಕಿದ ಘಟನೆ ಬಾಂಗ್ಲಾದ ಝಿನೈಧಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ನಲುವತ್ತೈದರ ಹರೆಯದ ಶ್ಯಾಮಾನಂದ ದುಷ್ಕರ್ಮಿಗಳಿಂದ ಕೊಲೆಗೀಡಾದ ಹಿಂದೂ ಪುರೋಹಿತ. ಸಾವಿಗೆ ಕಾರಣ ಗೊತ್ತಾಗಿಲ್ಲ.
ಶ್ಯಾಮಾನಂದ ಬೆಳಗ್ಗೆ ಪೂಜೆಗೆ ದೇವಸ್ಥಾನದ ಹೊರಗೆ ತಯಾರಿ ನಡೆಸುತ್ತಿದ್ದ ವೇಳೆ ಬೈಕ್‌ನಲ್ಲಿ ಆಗಮಿಸಿದ ಮೂವರು ದುಷ್ಕರ್ಮಿಗಳು ಮಾರಕಾಯುಧಗಳಿಂದ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





