ಪುನರ್ಜನ್ಮ ಸಾಧ್ಯವೇ ಎಂದು ತಿಳಿಯಲು ಟೆಕ್ಸಾಸ್‌ನಲ್ಲಿ ಬೃಹತ್ ಶವಾಗಾರ
50,000 ಮೃತರಿಗೆ ಇಲ್ಲಿ ಅವಕಾಶ !
.jpg)
ಟೆಕ್ಸಾಸ್,ಜುಲೈ 1: ಮನುಷ್ಯ ಏನೆಲ್ಲ ಸಂಶೋಧನೆಗಳನ್ನು ಹಾಗೂ ಸಾಧನೆಗಳನ್ನು ಮಾಡಿದ್ದರೂ ಸಾವನ್ನು ಗೆಲ್ಲುವುದು ಅವನಿಂದ ಆಗಿಲ್ಲ. ಆದರೆ ಈ ಉದ್ದೇಶದಲ್ಲಿ ಆತನಿಂದ ಆಯಸ್ಸನ್ನು ಗರಿಷ್ಠ ಹೆಚ್ಚಿಸಲಿಕ್ಕಾಗಿ ಉನ್ನತ ಚಿಕಿತ್ಸೆ ಮತ್ತು ಮದ್ದುಗಳನ್ನು ಕಂಡು ಹುಡುಕಲು ಸಾಧ್ಯವಾಗಿದೆ. ಈಗ ಇದೋ ಪುನರ್ಜನ್ಮ ಸಾಧ್ಯವೇ ಎಂದು ತಿಳಿಯಲು ಟೆಕ್ಸಾಸ್‌ನಲ್ಲಿ ಬೃಹತ್ ಶವಾಗಾರ ಬರಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಮನುಷ್ಯನ ಪುನರುಜ್ಜೀವೀಕರಣಕ್ಕಾಗಿ 50,000 ಮನುಷ್ಯ ಮೃತದೇಹಗಳನ್ನು ಈ ಶವಾಗಾರದ ಫ್ರೀಝರ್‌ನಲ್ಲಿಟ್ಟು ಜೋಪಾನ ಮಾಡಲಿದ್ದು ಭವಿಷ್ಯದಲ್ಲಿ ಪ್ರಾಣವನ್ನು ಮತ್ತೆ ಪಡೆಯುವ ಸಂಶೋಧನೆಯಲ್ಲಿ ವೈದ್ಯಕೀಯ ಶಾಸ್ತ್ರ ಯಶಸ್ವಿಯಾದರೆ ಅದರ ಮೂಲಕ ಮರು ಜೀವ ಪಡೆದು ಬದುಕಲು ಬಯಸುವವರ ಮೃತದೇಹವನ್ನು ಇಲ್ಲಿ ಕಾದಿರಿಸಲಾಗುತ್ತದೆ.
ಹಲವಾರು ವರ್ಷಗಳ ಚಿಂತನೆಗಳ ಮೂಲಕ ಇದೀಗ ಮೋರ್ಚರಿಗಾಗಿ ಅಗತ್ಯವಿರುವ ನಿರ್ಮಾಣ ಕಾಮಗಾರಿ ಈಗ ಟೆಕ್ಸಾಸ್‌ನ ಟೈಂಶಿಪ್ ಬಿಲ್ಡಿಂಗ್‌ನಲ್ಲಿ ಆರಂಭವಾಗಿದೆ. ಇಲ್ಲಿ ಕೇವಲ ಶವಾಗಾರವೊಂದನ್ನು ಮಾತ್ರ ಕಟ್ಟುವುದಲ್ಲ,ಬದಲಾಗಿ ಇದು ಜಗತ್ತಿನಲ್ಲಿ ಅತಿದೊಡ್ಡ ಎಕ್ಸ್ಟನ್ಶನ್ ರಿಸರ್ಚ್ ಕ್ರೈಯೋಫ್ರೀಸರವೇಶನ್ ಸೆಂಟರ್ ಕೂಡಾ ಆಗಿರುತ್ತದೆ. ಪ್ರಸಿದ್ಧ ಆರ್ಕಿಟೆಕ್ಟ್ ಸ್ಟೀಫನ್ ಲಾಲೆಂಟೈನ್ ಇದನ್ನು ವಿನ್ಯಾಸ ಮಾಡಿದ್ದಾರೆ. ಜೊತೆಗೆ ಶವಗಳನ್ನು ಇರಿಸುವ ಜಾಗ ಮಾತ್ರ ಇದಾಗಿರುವುದಿಲ್ಲ. ಬದಲಾಗಿ ಕೋಶಗಳು, ಟಿಷ್ಯುಗಳು, ಅವಯವಗಳನ್ನು ಮರುಬಳಕೆಗೆಗಾಗಿ ಅವುಗಳನ್ನು ಸಂಗ್ರಹಿಸುವ ಸೌಕರ್ಯ ಕೂಡಾ ಇಲ್ಲಿರಲಿದೆ. ಇದು ಭವಿಷ್ಯದ ಪೀಳಿಗೆಗಿರುವ ಪ್ರಾಜೆಕ್ಟ್ ಆಗಿದೆ ಎಂದು ವಾಲೆಂಟೈನ್ ಹೇಳುತ್ತಿದ್ದಾರೆ. ಸೆಂಟರ್ ಫಾರ್ ಇಮ್ಮೋರ್ಟಾಲಿಟಿ ಎಂಬ ಹೆಸರಿನಲ್ಲಿ ಟೆಕ್ಸಾಸ್‌ನಲ್ಲಿ ಇದು ಎದ್ದು ನಿಲ್ಲಲಿದೆ. ಫ್ರೀಝಿಂಗ್‌ನ ಹೆಚ್ಚಿನ ತಂತ್ರಜ್ಞಾನದ ವ್ಯವಸ್ಥೆಯನ್ನು ಇಲ್ಲಿ ಮಾಡಿಡಲಾಗುತ್ತದೆ. ಪ್ರಾಕೃತಿಕ ದುರಂತಗಳು ಭಯೋತ್ಪಾದಕರ ದಾಳಿಗಳಿಗೆ ನಾಶವಾಗದ ರೀತಿಯಲ್ಲಿ ಕಟ್ಟಡ ರಚನೆ ಇರಲಿದೆ. ಭೂವೈಜ್ಞಾನಿಕವಾಗಿ ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ ಶವಾಗಾರ ಸಿದ್ಧಗೊಳ್ಳುತ್ತಿದೆ.
ಇಂತಹ ಫ್ರೀಝರ್ ಮಾಡಿರಿಸಿದ್ದ ಮೊಲದ ಮೆದುಳನ್ನು ಪುನರುಜ್ಜೀವೀಕರಿಸುವ ಪರೀಕ್ಷೆಯಲ್ಲಿ ವಿಜ್ಞಾನಿಗಳು ಇತ್ತೀಚೆಗೆ ಹೆಚ್ಚು ಮುಂದುವರಿದಿದ್ದು ಇದು ಈ ಕ್ಷೇತ್ರದಲ್ಲಿ ಬಹು ನಿರೀಕ್ಷೆಯನ್ನು ಸೃಷ್ಟಿಸಿದೆ ಎನ್ನಲಾಗಿದೆ.







