ಸೌದಿ ಅರೇಬಿಯ: ಮೊಬೈಲ್ ಅಂಗಡಿಗಳನ್ನು ತೆರೆಯಲು 204 ಮಂದಿಗೆ ಸಾಲ

ರಿಯಾದ್, ಜುಲೈ 1: ಮೊಬೈಲ್ ಅಂಗಡಿಗಳಲ್ಲಿ ಸೌದೀಕರಣದ ಬಳಿಕ ಈ ಕ್ಷೇತ್ರದಲ್ಲಿ ಅಂಗಡಿಗಳನ್ನು ತೆರೆಯಲು ಸೌದಿ ಪ್ರಜೆಗಳಿಗೆ ಸಾಲ ಸೌಲಭ್ಯ ನೀಡುವ ಯೋಜನೆ ಆರಂಭವಾಗಿದೆ. ಸೌದಿ ಕ್ರೆಡಿಟ್ ಆಂಡ್ ಸೇವಿಂಗ್ಸ್ ಈ ಸಾಲಗಳನ್ನು ವಿತರಿಸಲಿದ್ದು ಈವರೆಗೆ ಅರ್ಜಿಹಾಕಿರುವ 204 ಮಂದಿಗೆ ಸಾಲ ಮಂಜೂರು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇವರಲ್ಲಿ 186 ಮಂದಿ ಪುರುಷರು ಮತ್ತು ಹದಿನೆಂಟು ಮಂದಿ ಮಹಿಳೆಯರಿದ್ದು ಮೊಬೈಲ್ ಅಂಗಡಿ ರಿಪೇರಿ ಅಂಗಡಿಗಳನ್ನು ತೆರೆಯಲು ಇವರಿಗೆ ಸಾಲ ನೀಡಲಾಗುತ್ತಿದೆ. ಗರಿಷ್ಠ ಎರಡು ಲಕ್ಷ ರಿಯಾಲ್ ಸಾಲ ನೀಡಲಾಗುವುದು, ಕಾರ್ಮಿಕ ಸಚಿವಾಲಯದ ನೆರವಿನಲ್ಲಿ ಈ ಸಾಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.ಸಾಲಪಡೆಯುವ ಅರ್ಹತೆ ಹದಿನೆಂಟು ವರ್ಷ ಪೂರ್ತಿಯಾದವರಿಗೆ ಮತ್ತು ಕಾರ್ಮಿಕ ಇಲಾಖೆಯಿಂದ ತರಬೇತಿ ಪಡೆದವರಿಗೆ ಮಾತ್ರ ಎಂದು ನಿಗದಿಪಡಿಸಲಾಗಿದೆ. ಸಾಲ ನೀಡಿ ಒಂದು ವರ್ಷ ಆದ ಬಳಿಕ ಮರುಪಾವತಿ ಕಂತು ಆರಂಭವಾಗಲಿದೆ.
Next Story





