ಸೋಮೇಶ್ವರ: ಕಡಲ್ಕೊರತ ಪ್ರದೇಶಕ್ಕೆ ಸಂಸದ ನಳಿನ್ ಕುಮಾರ್ ಭೇಟಿ
ಉಳ್ಳಾಲ,ಜು.1: ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ಪ್ರದೇಶಕ್ಕೆ ಶುಕ್ರವಾರ ಸಂಜೆ ಸಂಸದ ನಳಿನ್ ಕುಮಾರ್ ಕಟೀಲು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಶಾಶ್ವತ ಕಡಲ್ಕೊರೆತ ತಡೆಗೋಡೆ ಕಾಮಗಾರಿಗೆ ಒಟ್ಟಿಗೆ 900 ಕೋಟಿ ರೂಪಾಯಿ ಹಣ ಪ್ರಸ್ತಾಪಿಸಲಾಗಿದ್ದು ಅದರಲ್ಲಿ 238 ಕೋಟಿ ರೂಪಾಯಿ ಬಿಡುಗಡೆಯಾಗಿ ಉಳ್ಳಾಲದಲ್ಲಿ ಬ್ರೇಕ್ ವಾಟರ್ ಕಾಮಗಾರಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಉಚ್ಚಿಲ ಪ್ರದೇಶಕ್ಕೂ ಬ್ರೇಕ್ ವಾಟರ್ ವಿಸ್ತರಿಸಲು ಕೇಂದ್ರಕ್ಕೆ ಸುಮಾರು 38 ಕೋಟಿ ರೂ. ಅನುದಾನಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ರಾಜ್ಯ ಸರಕಾರದಿಂದ ಶಾಶ್ವತ ಪರಿಹಾರ ಮತ್ತು ಉಚ್ಚಿಲದ ಮೀನುಗಾರರ ಬೇಡಿಕೆಯಂತೆ ಸಂತ್ರಸ್ತರನ್ನು ಬೇರೆಡೆಗೆ ಸ್ಥಳಾಂತರಿಸುವ ಬಗೆಗೆ ಮುಂದಿನ ವಾರವೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಬೆ ಕರೆದು ಚರ್ಚಿಸಲಾಗುವುದೆಂದು ಹೇಳಿದರು.
ಉಚ್ಚಿಲದಲ್ಲಿ ಕಡಲು ಪಾಲಾದ ಮನೆಗಳ ಸಂತ್ರಸ್ಥರನ್ನು ಬೇಟಿ ನೀಡಿದ ಸಂಸದ ನಳಿನ್ ಕಡಲ್ಕೊರೆತದ ತೀವ್ರತೆಯನ್ನು ಅವಲೋಕಿಸಿದರು. ಈ ವೇಳೆ ಸಂತ್ರಸ್ಥ ಬೋವಿ ಮೀನುಗಾರರು ಎರಡು ವರುಷ ನೇತ್ರಾವತಿ ನದಿಯಲ್ಲಿ ನಡೆಯುವ ಮರಳುಗಾರಿಕೆಗೆ ನಿಷೇಧ ಹೇರಿ ಆವಾಗ ತನ್ನಿಂತಾನಾಗಿಯೇ ಕಡಲ್ಕೊರೆತ ನಿಲ್ಲುವುದೆಂದು ಒಕ್ಕೊರಳ ಮನವಿ ಮಾಡಿದರು.
ಈ ಸಂದರ್ದಲ್ಲಿ ಬಿಜೆಪಿ ಮುಖಂಡರಾದ ಸಂತೋಷ್ ಕುಮಾರ್ ಬೋಳಿಯಾರ್, ಚಂದ್ರಶೇಖರ್ ಉಚ್ಚಿಲ್, ಧನಲಕ್ಷ್ಮೀ ಗಟ್ಟಿ, ಮುನೀರ್ ಬಾವ ಮುಂತಾದವರು ಉಪಸ್ಥಿತರಿದ್ದರು.





.jpg.jpg)



