Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ತಾಯಿಯ ಹಾಲು ಏಕೆ ಅಮೃತ ?

ತಾಯಿಯ ಹಾಲು ಏಕೆ ಅಮೃತ ?

ವಾರ್ತಾಭಾರತಿವಾರ್ತಾಭಾರತಿ1 July 2016 11:21 PM IST
share
ತಾಯಿಯ ಹಾಲು ಏಕೆ ಅಮೃತ ?

ಭಾಗ-2

ಮುಂದೆ ಬದುಕಿನಲ್ಲಿ ಬರಬಹುದಾದ ಮಧುಮೇಹ, ಅತಿ ಕೊಲೆಸ್ಟ್ರಾಲ್, ಜಠರದ ಉರಿಯೂತದಂತಹ ತೊಂದರೆಗಳ ನಿವಾರಣೆಗೂ ಅದು ಸಹಾಯಕ. ಅಲರ್ಜಿಗಳು, ಪ್ರತಿಕ್ರಿಯಾತ್ಮಕ ಗಾಳಿಹಾದಿಯ ತೊಂದರೆಗಳನ್ನು ಕೂಡ ಎದೆಹಾಲು ನಿವಾರಿಸಬಲ್ಲದು. ಇಮ್ಯುನೊಗ್ಲಾಬ್ಯುಲಿನ್ ಮಗುವಿನ ಕರುಳಿನಲ್ಲಿ ಒಂದು ರಕ್ಷಕ ಪದರ ಏರ್ಪಡಿಸುವ ಮೂಲಕ ಮಗುವಿಗೆ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಅದಿಲ್ಲದಿದ್ದರೆ, ಮಗುವಿನ ಕರುಳಿನ ಗೋಡೆಯಲ್ಲಿ ಸೋಂಕುಗಳು ಕಾಣಿಸಿಕೊಂಡು, ಕರುಳು ಸ್ರಾವ ಸಂಭವಿಸಬಹುದು, ಇದರಿಂದಾಗಿ ಕರುಳು ದಾಟಿಹೋಗುವ ಇನ್ನೂ ಜೀರ್ಣವಾಗದಿದ್ದ ಪ್ರೊಟೀನ್‌ಗಳು ಅಲರ್ಜಿ, ಮತ್ತಿತರ ದೇಹದ ಆರೋಗ್ಯ ತೊಂದರೆಗಳಿಗೆ ಕಾರಣವಾಗಬಹುದು. ಎದೆಹಾಲಿನ ಬದಲು ಕೃತಕ ಹಾಲು ಸೇವಿಸುವ ಮಕ್ಕಳಲ್ಲಿ ಈ ರಕ್ಷಕ ಪದರ ಇರುವುದಿಲ್ಲ. ಹಾಗಾಗಿ, ಅವರಿಗೆ ಉರಿಯೂತ, ಅಲರ್ಜಿ ಮತ್ತು ಬಳಿಕ ಜೀವನದಲ್ಲಿ ಆರೋಗ್ಯದ ತೊಂದರೆಗಳ ಸಾಧ್ಯತೆ ಹೆಚ್ಚು. ಎದೆಹಾಲಿನಿಂದ ಮಗುವಿನ ಬುದ್ಧಿ ಮತ್ತೆ ಕೂಡ ಸುಧಾರಿಸುತ್ತದೆ. ಎದೆಹಾಲಿಗೂ ಗೃಹಿಕೆಯ ಸಾಮರ್ಥ್ಯಕ್ಕೂ ಸಂಬಂಧಗಳಿರುವುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಹುಟ್ಟಿನಿಂದ ಆರುವರೆ ವರ್ಷದ ತನಕ ಸುಮಾರು 17,000 ಶಿಶುಗಳ ಅಧ್ಯಯನ ನಡೆಸಲಾಗಿದ್ದು, ಅದರಲ್ಲಿ ಆರು ತಿಂಗಳ ಕಾಲ ಕೇವಲ ಎದೆಹಾಲು ಮಾತ್ರ ಮೊದಲು ಸೇವಿಸಿದ ಮಕ್ಕಳ ಐಕಿ ಅಂಕಗಳು, ಬೇರೆ ಬುದ್ಧಿಮತ್ತೆ ಪರೀಕ್ಷೆಗಳ ಫಲಿತಾಂಶಗಳು ಬೇರೆ ಮಕ್ಕಳಿಗಿಂತ ಹೆಚ್ಚಿರುವುದು ಹಾಗೂ ಅವರ ಗ್ರಹಣ ಶಕ್ತಿ ಎದೆಹಾಲು ಸೇವಿಸದ ಮಕ್ಕಳ ಗೃಹಣ ಶಕ್ತಿಗಿಂತ ಹೆಚ್ಚಿರುವುದು ಸಾಬೀತಾಗಿದೆ.

ಎದೆಹಾಲು ನೀಡುವಾಗ ತಾಯಿ-ಮಗುವಿನ ನಡುವಿನ ಭಾವನಾತ್ಮಕ ಅನುಭೂತಿಗಳು ಮೆದುಳಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತವೆ ಎಂಬುದು ತಜ್ಞರ ವಾದ. ಎದೆಹಾಲಿನಲ್ಲಿರುವ ಕೊಬ್ಬಿನ ಆಮ್ಲಗಳು ಕೂಡ ಇದರಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಎದೆಹಾಲಿನ ಕೊಬ್ಬಿನಲ್ಲಿ ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬಿನ ಆಮ್ಲಗಳ ದೀರ್ಘ ಸರಪಳಿ (ಡೊಕೊಸಾಹೆಕ್ಸೆಯಾನಿಕ್ ಆಮ್ಲ ಅಥವಾ ಈಏಅ ಮತ್ತು ಅರಾಷಿಡೋನಿಕ್ ಆಮ್ಲ ಅ್ಕಅ) ಇದ್ದು, ಇವು ಬೇರಾವುದೇ ಹಾಲಿನಲ್ಲಿ ಲಭ್ಯವಿಲ್ಲ. ಮಗುವಿನ ನರವ್ಯೆಹಗಳ ಬೆಳವಣಿಗೆಗೆ ಈ ಕೊಬ್ಬಿನ ಆಮ್ಲಗಳು ಬಹಳ ಮುಖ್ಯ.
ಎದೆಹಾಲು ಮಗುವನ್ನು ಬೊಜ್ಜಿನಿಂದಲೂ ರಕ್ಷಿಸುತ್ತದೆ. ಎದೆಹಾಲು ಕುಡಿಯುವ ಮಕ್ಕಳ ಆಹಾರ ಸೇವನೆ ವಿನ್ಯಾಸ ಕೂಡಾ ಉತ್ತಮ ಇರುವುದರಿಂದ, ಅವರು ಬೆಳೆಯುತ್ತಾ ಒಳ್ಳೆಯ ಆಹಾರ ಸೇವನೆ ವಿನ್ಯಾಸವನ್ನು ಗಳಿಸಿಕೊಳ್ಳುತ್ತಾ ಸಾಗುತ್ತಾರೆ. ಎದೆಹಾಲು ಕುಡಿಯುವ ಮಕ್ಕಳಿಗಿಂತ ಫಾರ್ಮುಲಾ ಹಾಲು ಕುಡಿಯುವ ಮಕ್ಕಳು ಆರಂಭಿಕ ಕೆಲವು ವಾರಗಳಲ್ಲಿ ಹೆಚ್ಚು ತೂಕ ಗಳಿಸಿಕೊಳ್ಳುತ್ತಾರೆ. ಇದಕ್ಕೂ ಬದುಕಿನಲ್ಲಿ ಮುಂದೆ ಬರುವ ಬೊಜ್ಜಿಗೂ ಸಂಬಂಧಗಳಿರುವುದನ್ನು ಕಂಡುಕೊಳ್ಳಲಾಗಿದೆ.
ಹಠಾತ್ ಶಿಶು ಸಾವಿನ ಸಿಂಡ್ರೋಮ್ ಅಪಾಯಗಳು ಎದೆಹಾಲು ಕುಡಿಯುವ ಮಕ್ಕಳಲ್ಲಿ ಕಡಿಮೆ.
ಅಂಡಾಶಯ, ಗರ್ಭಕೋಶದ ಕತ್ತಿನ ಕ್ಯಾನ್ಸರ್ ಸಾಧ್ಯತೆಗಳೂ, ಎದೆಹಾಲು ನೀಡುವ ತಾಯಿಗೆ ಕಡಿಮೆ.
ಮಗುವಿಗೆ ಮಾತ್ರವಲ್ಲದೆ ಎದೆಹಾಲು ನೀಡಿಕೆಯಿಂದ ತಾಯಿಗೂ ಬಾಣಂತನದ ಖಿನ್ನತೆ ಬರುವ ಸಾಧ್ಯತೆಗಳು ಕಡಿಮೆ. ಎದೆಹಾಲು ಶಿಶು ಆರೈಕೆಗಳ ಆಕ್ಟಿಟೋಸಿಸ್ ಹಾರ್ಮೊನ್ ತಾಯಿಯ ದೇಹದಲ್ಲಿ ಬಿಡುಗಡೆ ಆಗುತ್ತದೆ. ಇದು ಶಿಶು ಜನನದ ಬಳಿಕ ಗರ್ಭಾಶಯದ ಗಾತ್ರ ಕುಗ್ಗುವುದಕ್ಕೂ ಅಗತ್ಯವಾಗಿದ್ದು, ಹೆರಿಗೆ ಬಳಿಕದ ಈ ಸ್ರಾವ ತೂಕ ಕಡಿಮೆ ಇರುತ್ತದೆ.
ಎದೆಹಾಲು ನೀಡಿಕೆಯ ಲಾಭಗಳ ಬಗ್ಗೆ ಅವಿರತ ಅಧ್ಯಯನಗಳು ನಡೆದಿದೆ. ಒಂದು ಅಧ್ಯಯನದ ಪ್ರಕಾರ, ದಾಕುಗಳನ್ನು ಹಾಕಿಸಿಕೊಂಡ ಬಳಿಕ ಜ್ವರ ಬರುವ ಸಾಧ್ಯತೆ ಎದೆಹಾಲು ಕುಡಿಯದ ಮಗುವಿಗಿಂತ ಎದೆಹಾಲು ಕುಡಿದ ಮಗುವಿನಲ್ಲಿ ಕಡಿಮೆ. ಎದೆಹಾಲು ನೈಸರ್ಗಿಕ ಆದರೆ ಎಲ್ಲ ಪ್ರಕರಣಗಳಲ್ಲೂ ಅದು ಸುಲಭವಾಗಲಾರದು. ನಿಮಗೆ ಎದೆ ಹಾಲು ನೀಡಿಕೆಗೆ ಸಂಬಂಧಿಸಿದಂತೆ, ಬೆಂಬಲ ಅಥವಾ ಸಹಾಯ ಬೇಕಿದ್ದಲ್ಲಿ ನಿಮ್ಮ ಶಿಶುತಜ್ಞರನ್ನು ಸಂಪರ್ಕಿಸಲು ಹಿಂಜರಿಯ ಬೇಡಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X