ಭಯೋತ್ಪಾದಕರಿಗೆ ಎಕೆ 56 ಕೊಟ್ಟ ಬಿಜೆಪಿ ನಾಯಕನ ಬಂಧನ
ಜಮ್ಮು, ಜು.1: ತನ್ನ ಭದ್ರತಾ ಅಧಿಕಾರಿಗೆ (ಪಿಎಸ್‌ಒ) ಸೇರಿದ ಎಕೆ 56 ರೈಫಲನ್ನು ಭಯೋತ್ಪಾದಕರಿಗೆ ನೀಡಿದ ಆರೋಪದ ಮೇಲೆ ಜಮ್ಮು ಕಾಶ್ಮೀರದ ಬಿಜೆಪಿ ನಾಯಕ ಗುಲಾಮ್ ಮುಹಮ್ಮದ್ ಛೋಪನ್ ಅವರನ್ನು ಬಂಧಿಸಲಾಗಿದೆ.
ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಚಡೂರ ನಗರದ ಪನ್ಝಮ್ ಪ್ರದೇಶದಲ್ಲಿರುವ ಗೋರಿ ಮೊಹಲ್ಲಾದ ತನ್ನ ನಿವಾಸಕ್ಕೆ ನುಗ್ಗಿ ಶಂಕಿತ ಭಯೋತ್ಪಾದಕರು ಭದ್ರತಾ ಅಧಿಕಾರಿ ಬಶೀರ್ ಅಹಮದ್ ಅವರ ಸರ್ವಿಸ್ ರೈಫಲನ್ನು ಕಿತ್ತು ಪರಾರಿಯಾಗಿದ್ದಾರೆಂದು ಮಂಗಳವಾರ ಗುಲಾಮ್ ಮೊಹಮ್ಮದ್ ಹೇಳಿಕೊಂಡಿದ್ದರು.
ಆದರೆ ಈ ಘಟನೆ ನಡೆದಾಗ ಭದ್ರತಾ ಅಧಿಕಾರಿ ಬಶೀರ್ ಅಹಮದ್ ಬಿಜೆಪಿ ನಾಯಕನ ಮನೆಯಲ್ಲಿಲ್ಲರದೆ ಅದೇ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿದ್ದರೆಂದು ತನಿಖೆ ವೇಳೆ ತಿಳಿದು ಬಂದಿತ್ತು. ಬಿಜೆಪಿ ನಾಯಕನ ಮನೆಗೆ ನುಗ್ಗಿ ಭಯೋತ್ಪಾದಕರು ರೈಫಲನ್ನು ಕೊಡಬೇಕೆಂದು ಬೇಡಿಕೆಯಿಟ್ಟಾಗ ಅವರ ಮನೆ ಮಂದಿ ಕೂಡಲೇ ಒಳ ಹೋಗಿ ಅವುಗಳನ್ನು ಅವರಿಗೆ ತಂದಿತ್ತರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಂಕಿತ ಭಯೋತ್ಪಾದಕರು ರೈಫಲಿನೊಂದಿಗೆ ತಮ್ಮ ಬೈಕುಗಳಲ್ಲಿ ಪರಾರಿಯಾದರೆಂದು ಹೇಳಲಾಗಿದೆ.





