ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಗಾಡ್ಫಾದರ್ ಬಿಯರ್ : ನಿಷೇಧಕ್ಕಾಗಿ ಆಗ್ರಹ
ಹೊಸದಿಲ್ಲಿ,ಜುಲೈ2: ಗಾಡ್ಫಾದರ್ ಎಂಬ ಬಿಯರ್ ಧಾರ್ಮಿಕ ಭಾವನೆಗಳಿಗೆಹಾನಿಯೆಸುಗುತ್ತಿದೆ ಎಂದು ದಿಲ್ಲಿಯಲ್ಲಿ ಅದನ್ನು ನಿಷೇಧಿಸಬೇಕೆಂದೂ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಹಾಕಲಾಗಿದೆ. ರಾಜಧಾನಿಯಲ್ಲಿ ಗಾಡ್ಫಾದರ್ನ ಉತ್ಪಾದನೆ- ವಿತರಣೆ- ಮಾರಾಟವನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಜನ್ಚೇತನಾ ಮಂಚ್ ಎಂಬ ಸಂಘಟನೆ ದಿಲ್ಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದೆ.
ದೇವರನ್ನು ಸೂಚಿಸಲು ಬಳಸುವ ಗಾಡ್ ಎಂಬ ಪದವನ್ನು ಬಿಯರ್ಗೆ ಜೋಡಿಸಿ ಹೇಳುವುದು ಎಲ್ಲ ಧರ್ಮವಿಭಾಗಗಳ ಭಾವನೆಗಳಿಗೆ ಧಕ್ಕೆಯೊದಗಿಸುತ್ತದೆ ಎಂದು ಜನ್ಚೇತನ್ ಮಂಚ್ ಅಧ್ಯಕ್ಷ ದೇವೀಂದರ್ ಸಿಂಗ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.ಗಾಡ್ ಎಂಬ ಪದಕ್ಕೂ ಫಾದರ್ ಎಂಬ ಪದಕ್ಕೂ ಧಾರ್ಮಿಕವಾದ ಪ್ರಾಧಾನ್ಯತೆಯಿದೆ.ಬಿಯರ್ ತಯಾರಕರು ಮನಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಹಾನಿಯೆಸಗಿದ್ದಾರೆ. ದಿಲ್ಲಿ ಸರಕಾರ ನಗರದ ಅಂಗೀಕೃತ ಮದ್ಯದಂಗಡಿಗಳಲ್ಲಿ ಗಾಡ್ಫಾದರ್ಬಿಯರನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ.ಗಾಡ್ಫಾದರ್ ತಯಾರಕರು ಎರಡು ಇಂಗ್ಲಿಷ್ ಮತ್ತು ಹಿಂದಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಲಾಗಿದ್ದು ಈ ಅರ್ಜಿಯ ಆಲಿಕೆ ಮುಂದಿನ ವಾರನಡೆಯಲಿದೆ ಎಂದು ವರದಿಯಾಗಿದೆ.