ಕೇರಳದ ಈ ಮದ್ರಸದಲ್ಲಿ ಅಂಧ ವಿದ್ಯಾರ್ಥಿಗಳಿಗೆ ಕುರ್ ಆನ್ ಅಧ್ಯಾಯಗಳು ಕಂಠಪಾಠ
.jpg)
ಕೊಲತ್ತರ,ಜುಲೈ 2:ಅಂಧರಾದ ಮತ್ತು ಹೊರಗಿನ ಬೆಳಕು ಈ ಮಕ್ಕಳಿಗಿಲ್ಲ. ಆದರೆ ಅವರು ದೇವನನ್ನುಒಳಕಣ್ಣುಗಳಿಂದ ಕಾಣುತ್ತಿದ್ದಾರೆ. ಇರ್ಫಾನ್, ರಿಯಾಖತ್, ಮತ್ತು ಫಾತಿಮತ್ ಹಿಬಾ ಕೊಲತ್ತರ ಅಂಧರ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಹೊರಜಗತ್ತನ್ನು ನೋಡಲು ಅಗದಿದ್ದರೂ ಅಂಧತ್ವವನ್ನು ಆತ್ಮವಿಶ್ವಾಸದಿಂದಮತ್ತು ಪವಿತ್ರಕುರ್‌ಆನ್ ಸೂಕ್ತಗಳ ಬೆಳಕಿನಿಂದ ಎದುರಿಸುತ್ತಿದ್ದಾರೆ. ಎಲ್ಲ ಅಂಧ ವಿದ್ಯಾರ್ಥಿಗಳಂತೆ ಬ್ರೈಲ್ ಲಿಪಿಯಲ್ಲಿ ಮುದ್ರಿತವಾದ ಪುಸ್ತಕಗಳೊಂದಿಗೆ ಇವರು ಶಾಲೆಗೆ ಬರುತ್ತಾರೆ. ಆದರೆ ಪವಿತ್ರ ರಮಝಾನ್ ಮಾಸದಲ್ಲಿ ಬ್ರೈಲ್‌ನಲ್ಲಿ ಮುದ್ರಿತವಾದ ಪವಿತ್ರಕುರ್‌ಆನ್‌ನ್ನು ಕಣ್ಣಿರುವವರಿಗಿಂತಲೂ ಸ್ಪಷ್ಟವಾಗಿ ಓದುತ್ತಾರೆ.
ಕೇರಳದಲ್ಲಿ ಮೊತ್ತಮೊದಲ ಬಾರಿ ಅಂಧವಿದ್ಯಾರ್ಥಿಗಳಿಗೆ ಪವಿತ್ರಕುರ್‌ಆನ್ ಕಲಿಸಲು ತೊಡಗಿದ ಕೊಲತ್ತರದ ಅಂಧವಿದ್ಯಾಲಯದ ಅಧ್ಯಾಪಕರೇ ಪಾಕಿಸ್ತಾನ, ಕುವೈಟ್ ಸೌದಿಗಳಿಂದ ಬ್ರೈಲ್ ಲಿಪಿಯ ಪವಿತ್ರಕುರ್‌ಆನ್ ಅಧ್ಯಾಯಗಳಿರುವ ಬ್ರೈಲ್ ಕುರ್‌ಆನನ್ನು ಶಾಲೆಗೆ ಸ್ವಯಂಸೇವಾ ಸಂಘಟನೆಗಳ ನೆರವಿನಿಂದ ತರಿಸಿದ್ದಾರೆ. ಕುರ್‌ಆನ್ ಕಲಿಸಲಿಕ್ಕಾಗಿ ಅಧ್ಯಾಪಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಸರಿಯಾದ ಅಭ್ಯಾಸ ಇರುವುದರಿಂದ ಹಲವರಿಗೆ ಕಣ್ಣಿರುವವರಿಗಿಂತ ಸ್ಪಷ್ಟವಾಗಿ ಸಣ್ಣ ಅಧ್ಯಾಯಗಳನ್ನು ಕಂಠಪಾಠ ಮಾಡಲು ಸಾಧ್ಯವಾಗಿದೆ ಎಂದು ಅಧ್ಯಾಪಕರು ತಿಳಿಸಿದ್ದಾರೆ.







