ಭಟ್ಕಳ ತಾಲೂಕು ಛಾಯಾಗ್ರಾಹಕ ಸಂಘದಿಂದ ಶಾಂತಿಯುತ ಬಂದ್

ಭಟ್ಕಳ,ಜು.2: ರಾಜ್ಯ ಹಾಗೂ ಕೇಂದ್ರ ಸರಕಾರ ಛಾಯಾಚಿತ್ರಗ್ರಾಹಕರನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿ ಶನಿವಾರಿ ಭಟ್ಕಳ ತಾಲೂಕು ಛಾಯಚಿತ್ರಗ್ರಾಹಕರ ಸಂಘದ ಕರೆಗೆ ಸ್ಪಂಧಿಸಿ ತಾಲೂಕು ಛಾಯಾಚಿತ್ರಗ್ರಾಹಕರು ತಮ್ಮ ವೃತ್ತಿಯನ್ನು ಸ್ಥಗಿತಗೊಳಿಸಿ ಬಂದ್ ನಲ್ಲಿ ಶಾಮೀಲಾದರು.
ಶಾಂತಿಯುತ ಮೆರವಣೆಗೆ ಮೂಲಕ ಸಹಾಯಕ ಕಮಿಷನರ್ ಕಚೇರಿಗೆ ತಲುಪಿದ ಛಾಯಾಚಿತ್ರಗಾಹಕರು ತಮ್ಮ ವಿವಿಧ ಬೇಡಿಕೆಗಳಲ್ಲು ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಿದರು.
ಜಿಲ್ಲೆಯಲ್ಲಿ ಛಾಯಾಚಿತ್ರಗ್ರಾಹಕರ ಅಕಾಡೆಮಿ ನಿರ್ಮಿಸಬೇಕು. ಹಾಗೂ ಛಾಂಾಚಿತ್ರಗ್ರಾಹಕರ ಮಕ್ಕಳಿಗೆ ಆರ್q.ಟಿ.ಇ ಮೂಲಕ ವಿದ್ಯಾಭ್ಯಾಸ ನೀಬೆೀಕು. ಆರೋಗ್ಯ, ಜೀವವಿಮೆ, ಯಶಸ್ವಿನಿ, ಬಿಪಿಎಲ್ ಕಾರ್ಡ್ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ಛಾಯಾಗ್ರಾಹಕರಿಗೆ ಒದಗಿಸಬೇಕು. ಜೊತೆಗೆ ಛಾಯಾಚಿತ್ರಗ್ರಾಹಕರ ಕಲ್ಯಾಣ ನಿಧಿ ಸ್ಥಾಪಿಸಬೇಕು. ಸರಕಾರ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ, ಆರ್.ಟಿ.ಓ. ಪಾಸಪೋರ್ಟ ಹಾಗೂ ಇನ್ನುಳಿದ ಕಛೇರಿಗಳಲ್ಲಿ ವೆಬ್ ಕ್ಯಾಮರಾಗಳಿಂದ ಛಾಯಾಚಿತ್ರ ತೆಗೆಯುವುದನ್ನು ನಿಲ್ಲಿಸಿ ಛಾಯಾಚಿತ್ರಗ್ರಾಹಕರಿಗೆ ಇದರ ಅವಕಾಶ ಮಾಡಿಕೊಡಬೇಕು ಎಂಬ ಬೇಡಿಕೆಯನ್ನು ಈಡೇರಿಸುವಂತೆ ಮನವಿಪತ್ರದಲ್ಲಿ ತಿಳಿಸಲಾಗಿದೆ.
ಸಂಘದ ಅಧ್ಯಕ್ಷ ರಾಜೇಶ ಎನ್. ಹರಿಕಾಂತ, ಮಂಜು ನಾಯ್ಕ ಜಿಲ್ಲಾ ಛಾಯಾಚಿತ್ರಗ್ರಾಹಕ ಸಂಘಟನೆಯ ಕಾರ್ಯದರ್ಶಿವಿಷ್ಣು ದೇಶಬಂಡಾರಿ, ಮಾರುತಿ ಎಮ್. ನಾಯ್ಕ, ಕಿರಣ ಶೆಟ್ಟಿ, ಸೂರ್ಯಕಾಂ ಜೋಗಿ ಸೇರಿದಂತೆ ತಾಲೂಕಿನ ವಿವಿಧ ಛಾಯಚಿತ್ರಗ್ರಾಹಕರು ಉಪಸ್ಥಿತರಿದ್ದರು.





