ಬೆಳ್ತಂಗಡಿ: ಛಾಯಾಚಿತ್ರ ಗ್ರಾಹಕರ ಸಂಘದಿಂದ ಬಂದ್

ಬೆಳ್ತಂಗಡಿ, ಜು.2: ರಾಜ್ಯದಲ್ಲಿರುವ ಸುಮಾರು ಮೂರು ಲಕ್ಷ ಛಾಯಾಗ್ರಾಹಕರ ಒಳಿತಿಗಾಗಿ ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಸದಸ್ಯರು ಶನಿವಾರ ರಾಜ್ಯದಾದ್ಯಂತ ಛಾಯಾಗ್ರಹಣ ಬಂದ್ ಮಾಡಿದರು.
ವಿವಿದ ಬೇಡಿಕೆಯುಳ್ಳ ಮನವಿಯನ್ನು ಎಸ್.ಕೆ.ಪಿ.ಎ ಬೆಳ್ತಂಗಡಿ ವಲಯ ಅಧ್ಯಕ್ಷ ವೌರಿಸ್ ಫೆರ್ನಾಂಡಿಸ್‌ರ ನೇತೃತ್ವದಲ್ಲಿ ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹಾಗೂ ತಹಶೀಲ್ದಾರ್ ಪ್ರಸನ್ನ ಮೂರ್ತಿಗೆ ಸಲ್ಲಿಸಲಾಯಿತು.
ಈ ಸಂದರ್ಭ ತಾಲೂಕು ವಲಯದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
Next Story





