ಸರ್ಬಿಯಾ: ಕೆಫೆಯಲ್ಲಿ ಮಾರಣಹೋಮ ಮಧ್ಯವಯಸ್ಕನಿಂದ ಪತ್ನಿ ಸಹಿತ ಐವರ ಹತ್ಯೆ

ಬೆಲ್ಗ್ರೇಡ್,ಜು.2: ಉತ್ತರ ಸರ್ಬಿಯಾದಲ್ಲಿ ಶನಿವಾರ ಮುಂಜಾನೆ ಮಧ್ಯವಯಸ್ಕನೊಬ್ಬ ಕೆಫೆಯೊಂದಕ್ಕೆ ನುಗ್ಗಿ ತನ್ನ ಪತ್ನಿ ಸೇರಿದಂತೆ ಐವರನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದು, ಇತರ 20 ಮಂದಿಯನ್ನು ಗಾಯಗೊಳಿಸಿದ್ದಾನೆ
ಸ್ಥಳೀಯ ಉತ್ಸವ ನಡೆಯುತ್ತಿರುವ ಝಿಟ್‌ಸ್ಟಿ ಪಟ್ಟಣದ, ಉಪಹಾರ ಗೃಹವನ್ನು ಪ್ರವೇಶಿಸಿದ ಹಂತಕನು ಸ್ವಯಂಚಾಲಿತ ರೈಫಲ್‌ನಿಂದ ಗುಂಡು ಹಾರಿಸಿ ಪತ್ನಿ ಹಾಗೂ ಇನ್ನೋರ್ವ ಮಹಿಳೆಯನ್ನು ಕೊಂದಿದ್ದಾನೆ. ಆನಂತರ ಆತ ಅಲ್ಲಿದ್ದ ಇತರ ನಾಗರಿಕರ ಮೇಲೂ ಮನಬಂದಂತೆ ಗುಂಡುಹಾರಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಸರ್ಬಿಯಾದ ಗೃಹ ಸಚಿವ ನೆಬೊಜ್‌ಸಾ ಸ್ಟೆಫಾನೊವಿಕ್ ಹತ್ಯಾಕಾಂಡದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ದಾಂಪತ್ಯದಲ್ಲಿನ ವಿರಸವೇ ಈ ಘಟನೆಗೆ ಕಾರಣವಾಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ದಾಳಿಯ ಬಳಿಕ ಹಂತಕನು ಪರಾರಿಯಾಗಲು ಯತ್ನಿಸಿದನಾದರೂ, ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಸಫಲರಾದರೆಂದು ಸಚಿವ ಸ್ಟೆಫಾನೊವಿಕ್ ತಿಳಿಸಿದ್ದಾರೆ.
Next Story





