ಬ್ರೆಕ್ಸಿಟ್ ವಿರೋಧಿಸಿ ಲಂಡನ್‌ನಲ್ಲಿ ಬೃಹತ್ ರ್ಯಾಲಿ

ಲಂಡನ್,ಜು.2: ಯುರೋಪ್ ಒಕ್ಕೂಟದಿಂದ ಬ್ರಿಟನ್ ಹೊರಬರುವುದನ್ನು ಪ್ರತಿಭಟಿಸಿ ಶನಿವಾರ ಲಂಡನ್‌ನಲ್ಲಿ ನಡೆದ ಬೃಹತ್ ಪಾದಯಾತ್ರೆಯಲ್ಲಿ ಸಹಸ್ರಾರು ಮಂದಿ ಭಾಗವಹಿಸಿದ್ದರು. ಕಳೆದ ವಾರ ನಡೆದ ಜನಮತಗಣನೆಯಲ್ಲಿ ಬ್ರಿಟನ್ ಯುರೋಪ್ ಒಕ್ಕೂಟದಿಂದ ನಿರ್ಗಮಿಸುವುದಕ್ಕೆ ಹೆಚ್ಚಿನ ಬೆಂಬಲ ವ್ಯಕ್ತವಾಗಿತ್ತು. ಇಂದು ನಡೆದ ರ್ಯಾಲಿಯಲ್ಲಿ ಪಾಲ್ಗೊಂಡವರು ‘ಬ್ರಿಮೇನ್’ (ಬ್ರಿಟನ್‌ನಲ್ಲೇ ಉಳಿದುಕೊಳ್ಳೋಣ), ನಾವು ಸದಾ ಯುರೋಪ್ ಒಕ್ಕೂಟವನ್ನು ಪ್ರೀತಿಸುತ್ತೇವೆ ಎಂಬಿತ್ಯಾದಿ ಭಿತ್ತಿಪತ್ರಗಳನ್ನು ಹಿಡಿದುಕೊಂಡಿದ್ದರು.ಪಾದಯಾತ್ರೆಯ ಆನಂತರ ಪ್ರತಿಭಟನಕಾರರು ಬ್ರಿಟಿಶ್ ಸಂಸತ್‌ಭವನದ ಚೌಕದಲ್ಲಿರುವ ಪಾರ್ಕ್‌ಲೇನ್‌ನಲ್ಲಿ ಸಭೆ ನಡೆಸಿದರು.
Next Story





