ಪಾಕ್ ಜೈಲುಗಳಲ್ಲಿ 518 ಭಾರತೀಯರು

ಇಸ್ಲಾಮಾಬಾದ್,ಜು.2: 463 ಮಂದಿ ಮೀನುಗಾರರು ಸೇರಿದಂತೆ ಪ್ರಸ್ತುತ 518 ಮಂದಿ ಭಾರತೀಯರು ಪಾಕಿಸ್ತಾನದ ಜೈಲುಗಳಲ್ಲಿದ್ದಾರೆಂದು ವರದಿಯೊಂದು ತಿಳಿಸಿದೆ. ಪಾಕ್ ಸರಕಾರವು ಈ ಕುರಿತ ವಿವರಗಳನ್ನು ಭಾರತೀಯ ಹೈಕಮೀಶನ್ ಕಚೇರಿಗೆ ಹಸ್ತಾಂತರಿಸಿದೆ. 2008ರಲ್ಲಿ ಉಭಯ ದೇಶಗಳ ನಡುವೆ ಏರ್ಪಟ್ಟ ಒಪ್ಪಂದದ ಪ್ರಕಾರ ಜನವರಿ 1ರಿಂದ ಜುಲೈ 1ರವರೆಗಿನ ಅವಧಿಯಲ್ಲಿ ತಮ್ಮ ಜೈಲುಗಳಲ್ಲಿರುವ ಉಭಯದೇಶಗಳ ಕೈದಿಗಳ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತಿದೆ.
Next Story





