ಅಶ್ಲೀಲ ಸಿನೆಮಾ ಪೋಸ್ಟರ್ ತೆರವುಗೊಳಿಸಿದ ಕಾರ್ಪೊರೇಟರ್

ಶಿವಮೊಗ್ಗ, ಜು. 2: ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಅಶ್ಲೀಲ ಸಿನೆಮಾ ಪೋಸ್ಟರ್‌ಗಳ ಹಾವಳಿ ವಿಪರೀತ ಮಟ್ಟಕ್ಕೆ ತಲುಪಿದೆ. ಇದರಿಂದ ರಸ್ತೆಗಳಲ್ಲಿ ಹೆಣ್ಣು ಮಕ್ಕಳು ಮುಜುಗರದಿಂದ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಶ್ಲೀಲ ಸಿನೆಮಾ ಪೋಸ್ಟರ್‌ಗಳಿಗೆ ಕಡಿವಾಣ ಹಾಕಬೇಕೆಂಬ ನಾಗರಿಕರ ಒತ್ತಾಯಕ್ಕೆ ಮನ್ನಣೆ ಸಿಕ್ಕಿಲ್ಲ. ಈ ನಡುವೆ ಶನಿವಾರ ಮಹಾನಗರ ಪಾಲಿಕೆ ಹಣಕಾಸು ಸ್ಥಾಯಿ ಸಮಿತಿಯ ಅಧ್ಯಕ್ಷ ಐಡಿಯಲ್ ಗೋಪಿಯವರು ತಮ್ಮ ವಾರ್ಡ್ ವ್ಯಾಪ್ತಿಯ ತಿಲಕ್‌ನಗರ ಬಡಾವಣೆಯ ಮುಖ್ಯ ರಸ್ತೆಯ ಗೋಡೆಯೊಂದಕ್ಕೆ ಹಾಕಿದ್ದ ಅಶ್ಲೀಲ ಸಿನೆಮಾ ಪೋಸ್ಟರ್‌ವೊಂದನ್ನು ತೆರವುಗೊಳಿಸಿ ನಾಗರಿಕರ ಮೆಚ್ಚುಗೆಗೆ ಪಾತ್ರವಾದರು. ಮುಖ್ಯ ರಸ್ತೆಯಲ್ಲಿ ನಿರಂತರವಾಗಿ ಅಶ್ಲೀಲ ಸಿನೆಮಾ ಪೋಸ್ಟರ್‌ಗಳನ್ನು ಅಂಟಿಸಲಾಗುತ್ತಿದೆ. ಇದರಿಂದ ನಾವುಗಳು ರಸ್ತೆಯಲ್ಲಿ ತಲೆತಗ್ಗಿಸಿಕೊಂಡು ಓಡಾಡುವಂತಾಗಿದೆ. ಹದಿಹರಿಯದ ವಯಸ್ಸಿನ ಯುವಕರು, ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸುವಂತಿವೆ. ಈ ರೀತಿಯ ಪೋಸ್ಟರ್‌ಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಮನವಿ ಮಾಡಿದರು. ಈ ರೀತಿಯ ಪೋಸ್ಟರ್‌ಗಳನ್ನು ಹಾಕುವವರ ವಿರುದ್ಧ್ದ ಪೊಲೀಸ್ ಇಲಾಖೆಯು ಕಾನೂನು ರೀತಿಯ ಸೂಕ್ತ ಕ್ರಮ ಜರಗಿಸಬೇಕು. ತಾವು ಕೂಡ ಈ ಬಗ್ಗೆ ಪಾಲಿಕೆ ಮೇಯರ್ ಹಾಗೂ ಆಯುಕ್ತರ ಗಮನಕ್ಕೆ ತಂದು ಅಶ್ಲೀಲ ಸಿನೆಮಾ ಪೋಸ್ಟರ್, ಜಾಹೀರಾತು ಫಲಕ ಹಾಕಲು ಅವಕಾಶ ನೀಡದಂತೆ ಒತ್ತಾಯಿಸುತ್ತೇನೆ ಎಂದರು. ಪೊಲೀಸ್ ಇಲಾಖೆ, ಪಾಲಿಕೆ ಆಡಳಿತ ಗಮನಹರಿಸಲಿ...ೞಅಶ್ಲೀಲ ಸಿನೆಮಾ ಪೋಸ್ಟರ್, ಜಾಹೀರಾತು ಫಲಕಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲವಾಗಿದೆ. ಪ್ರಸ್ತುತ ಶಿವಮೊಗ್ಗ ನಗರದ ಹಲವೆಡೆ ಅಶ್ಲೀಲ ಸಿನೆಮಾ ಪೋಸ್ಟರ್, ಜಾಹೀರಾತು ಫಲಕಗಳನ್ನು ಹಾಕಲಾಗುತ್ತಿದೆ. ಇದರ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಡಳಿತ ಸೂಕ್ತ ಕ್ರಮಕೈಗೊಳ್ಳಬೇಕು.
ಈ ರೀತಿಯ ಪೋಸ್ಟರ್-ಜಾಹೀರಾತು ಫಲಕ ಹಾಕಲು ಅವಕಾಶ ನೀಡಬಾರದು ಎಂದು ನಿವೃತ್ತ ಆಡಿಟರ್ ಮಲ್ಲಿಕಾರ್ಜುನಪ್ಪರವರು ಆಗ್ರಹಿಸಿದ್ದಾರೆ.





