‘ಪರಿಸರ ಉಳಿದರೆ ಮಾನವನ ಆರೋಗ್ಯವೃದ್ಧಿ’
ಕೋಟಿ ವೃಕ್ಷ ಆಂದೋಲನ ಅಭಿಯಾನ-2016
 mdg news ph.jpg)
ಮೂಡಿಗೆರೆ, ಜು.2: ಮರ ಗಿಡಗಳನ್ನು ಬೆಳೆಯುವುದರಿಂದ ಪರಿಸರ ಉಳಿಯುತ್ತದೆ. ಪರಿಸರ ಉಳಿದರೆ ಮಾನವನ ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾ ರ್ಥಿಯು ಗಿಡಗಳನ್ನು ನೆಟ್ಟು ಪೋಷಿಸಿ ಬೆಳೆಸ ಬೇಕು ಎಂದು ಲೇಖಕಿ ಆರ್.ರಾಜೇಶ್ವರಿ ಪೂರ್ಣ ಚಂದ್ರ ತೇಜಸ್ವಿ ಎಂದು ಹೇಳಿದರು.
ಅವರು ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಅರಣ್ಯ ಇಲಾಖೆ ಹಮ್ಮಿಕೊಂಡಿದ್ದ ಕೋಟಿ ವೃಕ್ಷ ಆಂದೋ ಲನ ಅಭಿಯಾನ-2016 ರನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾ ಡಿದರು.
ಇಂದಿನ ದಿನಗಳಲ್ಲಿ ಮರಗಳ ಮಾರಣ ಹೋಮದಿಂದ ಪರಿಸರ ನಾಶ ವಾಗುವು ದರೊಂದಿಗೆ ಬರದ ಛಾಯೆ ಆವರಿ ಸುತ್ತಿದೆ. ಕಾಡು ಪ್ರಾಣಿಗಳು ಆಹಾರ ವನ್ನು ಹುಡುಕಿಕೊಂಡು ನಾಡಿಗೆ ಲಗ್ಗೆ ಇಡುತ್ತಿವೆ. ಹೀಗೆ ಮುಂದುವರಿದಲ್ಲಿ ಭೀಕರ ಬರದ ಛಾಯೆಯನ್ನು ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯೆ ಡಾ.ಮೋಟಮ್ಮ ಮಾತನಾಡಿ, ಪರಿಸರ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಪ್ರತಿಯೊಬ್ಬ ವಿದ್ಯಾ ರ್ಥಿಗಳಿಗೂ ಸಸಿಗಳನ್ನು ನೀಡುವಂತೆ ಅರಣ್ಯಾಧಿಕಾರಿಗಳಿಗೆ ತಿಳಿಸಿದ ಅವರು, ಪ್ರತಿ ವರ್ಷ ನೀಡಿದಂತಹ ಗಿಡಗಳ ಆರೈಕೆ ಬಗ್ಗೆ ಪರಿಶೀಲನೆ ನಡೆಸಿ ಮರ ಮತ್ತು ಗಿಡಗಳ ಬಗ್ಗೆ ಕಾಳಜಿ ವಹಿಸಿ ಉತ್ತಮವಾಗಿ ಬೆಳೆಸಿದಂತಹ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವಂತೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್, ಕಾಟಾಚಾರಕ್ಕೆ ಗಿಡಮರ ಗಳನ್ನು ನೆಟ್ಟು ಪರಿಸರ ದಿನಾಚರಣೆ ಆಚ ರಿಸುವ ಬದಲು ನೆಟ್ಟಂತಹ ಗಿಡಗಳನ್ನು ಸಂರಕ್ಷಿಸಿ ಅವುಗಳ ಪೋಷಣೆ ಮಾಡುವಂತೆ ತಿಳಿಸಿದರು.
ಶಾಸಕ ಬಿ.ಬಿ.ನಿಂಗಯ್ಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ತಾಪಂ ಅಧ್ಯಕ್ಷ ರತನ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್ ವೈ.ಕೆ., ವಲಯ ಅರಣ್ಯಾಧಿಕಾರಿ ಎಸ್.ಪಿ.ಮಹದೇವ್ ಮಾತನಾಡಿದರು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್, ಜಿಪಂ ಸದಸ್ಯೆ ಅಮಿತಾ ಮುತ್ತಪ್ಪ, ತಾಪಂ ಸದಸ್ಯರಾದ ವೇದಾವತಿ ಲಕ್ಷ್ಮಣ್, ಪ್ರಮೀಳಾ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್,ಮತ್ತಿತರರು ಉಪಸ್ಥಿತರಿದ್ದರು.
ಮೂಡಿಗೆರೆ ಪಟ್ಟಣದ ಸರಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ಅರಣ್ಯ ಇಲಾಖೆ ಹಮ್ಮಿ ಕೊಂಡಿದ್ದ ಕೋಟಿ ವೃಕ್ಷ ಆಂದೋಲನ ಅಭಿಯಾನಕ್ಕೆ ಲೇಖಕಿ ಆರ್.ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಚಾಲನೆ ನೀಡಿದರು.







