ತಾಪಂ ಅಧ್ಯಕ್ಷರಿಂದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ
ಮೂಡಿಗೆರೆ, ಜು.2: ಸರಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ವಸತಿ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಶೀಘ್ರದಲ್ಲಿ ಸರಿಪಡಿಸಬೇಕೆಂದು ತಾಪಂ ಅಧ್ಯಕ್ಷ ಕೆ.ಸಿ.ರತನ್ ತಿಳಿಸಿದರು.
ಅವರು ಪಟ್ಟಣದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ನ್ಯೂನತೆಗಳಾದ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕೊಠಡಿಗಳನ್ನು ಪರಿಶೀಲಿಸಿದರು. ವಿದ್ಯಾರ್ಥಿ ನಿಲಯ ಪ್ರಾರಂಭಗೊಂಡು ಒಂದು ತಿಂಗಳು ಕಳೆದರೂ ಇಲ್ಲಿನ ವಿದ್ಯಾರ್ಥಿನಿಲಯದಲ್ಲಿ ನವೀಕರಣ ಕಾಮಗಾರಿ ಇಂದಿಗೂ ಅಂತ್ಯಗೊಳಿಸಿಲ್ಲ. ಒಳ ಭಾಗದಲ್ಲಿ ಹಾಕುವ ಟೈಲ್ಸ್‌ಗಳು ಹೊರಾಂಡ್ಕೂ ಹಾಕಿದ್ದು, ಇದರಿಂದ ಮಕ್ಕಳು ಮಳೆಗಾಲದಲ್ಲಿ ಜಾರಿ ಬೀಳುವ ಸಂಭವವಿದೆ ಇದನ್ನು ಕೂಡಲೇ ಬದಲಾಯಿಸಬೇಕು ಎಂದು ಹಾಸ್ಟೆಲ್ ಮೇಲ್ವಿಚಾರಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಹೆಸಗಲ್ ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ್, ಸದಸ್ಯ ರಾದ ಹೆಸಗಲ್ ಗಿರೀಶ್, ಪ್ರಶಾಂತ್, ಅನಿತಾ, ಸ್ಥಳೀಯರಾದ ಯೋಗೇಶ್ ಆಚಾರ್ಯ, ಮಂಜುನಾಥ್, ಪ್ರಸನ್ನ ತಳವಾರ ಮತ್ತಿತರರು ಉಪಸ್ಥಿತರಿದ್ದರು.
Next Story





