ಡೋಪಿಂಗ್ ಪರೀಕ್ಷೆಯಲ್ಲಿ ರಶ್ಯದ ಒಲಿಂಪಿಯನ್ ಅನುತ್ತೀರ್ಣ
ಮಾಸ್ಕೊ, ಜು.2: ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಒಲಿಂಪಿಕ್‌ನ ಹಾಲಿ ಹೈಜಂಪ್ ಚಾಂಪಿಯನ್ ರಶ್ಯದ ಅನ್ನಾ ಚಿಕೆರೊವಾರಿಗೆ ಅಂತಾರಾಷ್ಟ್ರೀಯ ಅಸೋಸಿಯೇಶನ್ ಅಥ್ಲೆಟಿಕ್ಸ್ ಫೆಡರೇಶನ್(ಐಎಎಎಫ್) ನಿಷೇಧ ಹೇರಿದೆ. ಈ ವಿಷಯವನ್ನು ಸ್ವತಹ ಚಿಚೆರೋವಾ ಶುಕ್ರವಾರ ಬಹಿರಂಗಪಡಿಸಿದ್ದಾರೆ.
ಈಗ ಉದ್ಬವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಲಿ ನಾನು ನಿಷೇಧ ಎದುರಿಸುತ್ತಿರುವ ವಿಷಯವನ್ನು ಬಹಿರಂಗಪಡಿಸುತ್ತಿದ್ದೇನೆ ಎಂದು ನ್ಯೂಸ್ ಏಜೆನ್ಸಿ ಆರ್-ಸ್ಪೋರ್ಟ್‌ಗೆ ಚಿಕೆರೊವಾ ಹೇಳಿದ್ಧಾರೆ.
33ರ ಹರೆಯದ ಚಿಕೆರೊವಾ 2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಹೈ-ಜಂಪ್ ವಿಭಾಗದಲ್ಲಿ ಚಿನ್ನ ಜಯಿಸಿದ್ದ ಚಾಂಪಿಯನ್ ಆಗಿದ್ದರು. 2008ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಬೀಜಿಂಗ್‌ನಲ್ಲಿ ನಡೆದ ಗೇಮ್ಸ್‌ನಲ್ಲಿ ರಶ್ಯದ 14 ಅಥ್ಲೀಟ್‌ಗಳು ಸ್ಯಾಂಪಲ್‌ಗಳನ್ನು ನೀಡಿದ್ದು, ಚಿಕೆರೊವಾ ಸಹಿತ 9 ಪದಕ ವಿಜೇತರು ಅನುತ್ತೀರ್ಣರಾಗಿದ್ದರು ಎಂದು ರಶ್ಯದ ಒಲಿಂಪಿಕ್ ಸಮಿತಿ(ಆರ್‌ಒಸಿ) ಇತ್ತೀಚೆಗೆ ಹೇಳಿಕೆ ನೀಡಿತ್ತು.
Next Story





