ಯುರೋ ಕಪ್ ;ವೇಲ್ಸ್‌ಗೆ ಐತಿಹಾಸಿಕ ಜಯ
ಬೆಲ್ಜಿಯಂಗೆ ಆಘಾತ

ಲಿಲ್ಲೆ, ಜು.2: ವೇಲ್ಸ್ ತಂಡ ಇಲ್ಲಿ ನಡೆದ ಯುರೋ ಕಪ್ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಬೆಲ್ಜಿಯಂ ವಿರುದ್ಧ 3-1 ಅಂತರದಲ್ಲಿ ಜಯ ಗಳಿಸುವುದರೊಂದಿಗೆ ಮೊದಲ ಬಾರಿ ಸೆಮಿಫೈನಲ್ ತಲುಪಿದೆ.
ಐತಿಹಾಸಿಕ ಸಾಧನೆ ಮಾಡಿರುವ ವೇಲ್ಸ್ ತಂಡ ಸೆಮಿ ಫೈನಲ್‌ನಲ್ಲಿ ಪೋರ್ಚುಗಲ್‌ನ್ನು ಎದುರಿಸಲಿದೆ.
ಸ್ಟಾರ್ ಆಟಗಾರ ಗೆರಾತ್ ಬೇಲ್ ಅವರು ಯುರೋ ಕಪ್‌ನಲ್ಲಿ ತನ್ನ ತಂಡ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಜೀವಂತವಾಗಿರಿಸಿದ್ದಾರೆ.
ವೇಲ್ಸ್ ತಂಡದ ವಿಲಿಯಮ್ಸನ್(30 ನಿ.), ರಾಬಿನ್ಸನ್ ಕಾನು(55ನಿ.) ಮತ್ತು ವೊಕೆಸ್(85 ನಿ.) ಗೋಲು ದಾಖಲಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ವೇಲ್ಸ್ ಮೊದಲ ಬಾರಿ ಸೆಮಿಫೈನಲ್ ತಲುಪಿದೆ.
ಬೆಲ್ಜಿಯಂ ಪರ ರಾಡ್ಜಾ ನೈನ್‌ಗ್ಗೊಲಾನ್ (13ನಿ.) ಏಕೈಕ ಗೋಲು ದಾಖಲಿಸಿದರು.
ಬೆಲ್ಜಿಯಂ ತಂಡದ ನೈನ್ ಗೊಲ್ಗಾನ್ ಆಟದ 13ನೆ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಬಳಿಕ ವೇಲ್ಸ್ ತಂಡದ ವಿಲಿಯಮ್ಸನ್ ಹೆಡರ್ ಮೂಲಕ ತಂಡದ ಖಾತೆಗೆ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಲು ನೆರವಾದರು.
1958ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ವೇಲ್ಸ್ ತಂಡ ಕ್ವಾರ್ಟರ್ ಫೈನಲ್ ತಲುಪಿದ್ದು ವೇಲ್ಸ್ ತಂಡದ ದೊಡ್ಡ ಸಾಧನೆಯಾಗಿತ್ತು. ಆ ಬಳಿಕ ಇದಿಗ ಮೊದಲ ಸಾಧನೆ ಮಾಡಿದರು.
58 ವರ್ಷಗಳ ಇತಿಹಾಸ: ವೆಲ್ಸ್ ತಂಡ ಯಾವುದೇ ಮೇಜರ್ ಟೂರ್ನಮೆಂಟ್‌ನಿಂದ ದೂರ ಸರಿದು 58 ವರ್ಷವಾಗಿದೆ. ಈ ಅನಿರೀಕ್ಷಿತ ಸಾಧನೆ ಮಾಡಿದೆ.
1958ರಲ್ಲಿ ಹಂಗೇರಿ ವಿರುದ್ಧ ವಿಶ್ವಕಪ್‌ನಲಲಿ 2-1 ಗೆಲುವು, 1991ರಲ್ಲಿ ವಿಶ್ವ ಚಾಂಪಿಯನ್ ಜರ್ಮನಿ ಮತ್ತು 2002ರಲ್ಲಿ ಇಟಲಿ ವಿರುದ್ಧ ಜಯ ಗಳಿಸಿತ್ತು.
2016ರ ತಂಡದ ಯಶಸ್ಸಿನಲ್ಲಿ ಗೆರಾತ್ ಬೇಲ್ ದೊಡ್ಡ ಕೊಡುಗೆ ನೀಡಿದ್ದಾರೆ. ರಿಯಲ್ ಮ್ಯಾಡ್ರಿಡ್‌ನ ಫಾರ್ವರ್ಡ್ ಆಟಗಾರ ಬೇಲ್ ಯೋಜನೆ ಫಲ ನೀಡಿದೆ. ಇಂದಿನ ಪಂದ್ಯದಲ್ಲಿ ತಂಡದ ನಾಯಕ ವಿಲಿಯಮ್ಸನ್ ಅನನ್ಯ ಸಾಧನೆ ಮಾಡಿದ್ದಾರೆ.
ಆ್ಯರೊನ್ ರಮ್‌ಸೆಯ್ ವೇಲ್ಸ್ ಪರ ಗೋಲು ದಾಖಲಿಸಿದ್ದಾರೆ.ಆದರೆ ಅರ್ಸೆನಲ್‌ನ ಮಿಡ್ ಫೀಲ್ಡರ್ ಬೆನ್ ಡೇವಿಸ್‌ಗೆ ಟೂರ್ನಮೆಂಟ್‌ನಲ್ಲಿ ಎರಡನೆ ಬಾರಿ ಹಳದಿ ಕಾರ್ಡ್‌ನ ದರ್ಶನವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಸೆಮಿ ಫೈನಲ್‌ನಲ್ಲಿ ಆಡುವ ಅವಕಾಶ ಇಲ್ಲದಾಗಿದೆ.
ಬೇಲ್ -ರೊನಾಲ್ಡೊ : ಸೆಮಿಫೈನಲ್‌ನಲ್ಲಿ ವೇಲ್ಸ್‌ನ ಬೇಲ್ ಮತ್ತು ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ನಡುವಿನ ಹಣಾಹಣಿಯಾಗಿ ಗಮನ ಸೆಳೆದಿದೆ.
90 ನಿಮಿಷಗಳ ಆಟದಲ್ಲಿ ಬೇಲ್ ಮತ್ತು ರೊನಾಲ್ಡೊ ತಮ್ಮ ತಂಡದ ಗೆಲುವಿಗೆ ಯಾವ ರೀತಿ ಶ್ರಮಿಸುತ್ತಾರೆಂದು ಕಾದು ನೋಡಬೇಕಾಗಿದೆ.
ಅಂಕಿ -ಅಂಶ
*ವೇಲ್ಸ್ ತಂಡ 2016ರ ಯುರೋ ಕಪ್‌ನಲ್ಲಿ 10 ಗೋಲು ಗಳಿಸಿದೆ. ಇದಕ್ಕೆ ಮೊದಲು ಬ್ರಿಟಿಷ್ ತಂಡ ವಿಶ್ವಕಪ್‌ನಲ್ಲಿ 1966ರಲ್ಲಿ 11 ಗೋಲು ಗಳಿಸಿದೆ.
*ಸ್ಯಾಮ್‌ವೋಕ್ಸ್ ವೇಲ್ಸ್ ಪರ 11 ಪಂದ್ಯಗಳಲ್ಲಿ ಮೊದಲ ಗೋಲು ದಾಖಲಿಸಿದರು.
‘‘ ನಾವು ಇಲ್ಲಿ ಎಂಜಾಯ್ ಮಾಡಲು ಬಂದಿಲ್ಲ. ಸ್ಪರ್ಧಿಸಲು ಬಂದಿದ್ದೇವೆ.ನಾವು ಸೈನಿಕರಂತೆ ಹೋರಾಡಿ ಗೆದ್ದೆವು :ಕ್ರಿಸ್ ಕೋಲ್ಮೆನ್ , ವೇಲ್ಸ್ ಮ್ಯಾನೇಜರ್
‘‘ ಯುರೋಪಿಯನ್ ಚಾಂಪಿಯನ್‌ಶಿಪ್ ಬಳಿಕ ತನ್ನ ಮುಂದಿನ ನಿರ್ಧಾರ ಕೈಗೊಳ್ಳುವೆ ಒಂದು ಪಂದ್ಯದ ನಂತರ ನಾನು ನಿರ್ಧಾರ ಮಾಡುವುದಿಲ್ಲ :ಮಾರ್ಕ್ ವಿಲ್ಮೊಟ್ಸ್, ಬೆಲ್ಜಿಯಂ ಕೋಚ್.





