ಅಥ್ಲೀಟ್‌ಗಳಿಗೆ ಒಲಿಂಪಿಕ್ಸ್ ಅರ್ಹತೆಗೆ ಕೊನೆಯ ಅವಕಾಶ
ಇಂಡಿಯನ್ ಗ್ರಾನ್‌ಪ್ರಿ ಟೂರ್ನಿ:
ಹೊಸದಿಲ್ಲಿ, ಜು.2: ಮುಂದಿನ ತಿಂಗಳು ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಇನ್ನ್ನೂ ಕೆಲವು ಅಥ್ಲೀಟ್‌ಗಳಿಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಅವಕಾಶ ಮಾಡಿಕೊಳ್ಳಲು ಜು.10-11 ರಂದು ಇಂಡಿಯನ್ ಗ್ರಾನ್‌ಪ್ರಿ ಟೂರ್ನಿಯನ್ನು ಆಯೋಜಿಸಲು ಭಾರತದ ಅಥ್ಲೆಟಿಕ್ಸ್ ಫೆಡರೇಶನ್(ಎಎಫ್‌ಐ) ನಿರ್ಧರಿಸಿದೆ.
ಆಗಸ್ಟ್ 5 ರಿಂದ 21ರ ತನಕ ನಡೆಯಲಿರುವ ರಿಯೋ ಗೇಮ್ಸ್‌ಗೆ ಈಗಾಗಲೇ 24 ಟ್ರಾಕ್ ಆ್ಯಂಡ್ ಫೀಲ್ಡ್ ಅಥ್ಲೀಟ್‌ಗಳು ಅರ್ಹತೆ ಪಡೆದಿದ್ದಾರೆ. ಮತ್ತಷ್ಟು ಅಥ್ಲೀಟ್‌ಗಳು ಅರ್ಹತೆ ಪಡೆಯಬೇಕೆನ್ನುವುದು ಎಎಫ್‌ಐ ಬಯಕೆಯಾಗಿದೆ.
ಟೂರ್ನಿಯ ಸ್ಥಳವನ್ನು ಮುಂದಿನ ವಾರ ಘೋಷಿಸಲಾಗುತ್ತದೆ. ಟೂರ್ನಿಯು ಬೆಂಗಳೂರು ಇಲ್ಲವೇ ತಿರುವನಂತಪುರದಲ್ಲಿ ನಡೆಯುವ ಸಾಧ್ಯತೆಯಿದೆ.
ಅಥ್ಲೀಟ್‌ಗಳಿಗೆ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯಲು ಜು.11 ಕೊನೆಯ ದಿನವಾಗಿದೆ.
ಎಎಫ್‌ಐ ಜು.10-11 ರಂದು 3ನೆ ಆವೃತ್ತಿಯ ಇಂಡಿಯನ್ ಗ್ರಾನ್‌ಪ್ರಿ ಟೂರ್ನಿ ಆಯೋಜಿಸಿದೆ. ಈ ಟೂರ್ನಿಯು ರಿಯೋ ಗೇಮ್ಸ್‌ನಲ್ಲಿ ಅರ್ಹತೆ ಪಡೆಯಲು ಪ್ರಬಲ ಸ್ಪರ್ಧಿಗಳಿಗೆ ಅಂತಿಮ ಅವಕಾಶವಾಗಿದೆ ಎಂದು ಫೆಡರೇಶನ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.





