ಜೋಕಟ್ಟೆ: ಅಕ್ರಮ ಮರಳು ಸಾಗಾಟ ಪತ್ತೆ
ಮಂಗಳೂರು, ಜು.2: ಜೋಕಟ್ಟೆ ಬಳಿ ಅನಧಿಕೃತವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ನಾಗೇಂದ್ರಪ್ಪಟಿಪ್ಪರನ್ನು ವಶಪಡಿಸಿಕೊಂಡು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜೋಕಟ್ಟೆ ಕಡೆಯಿಂದ ಮರಳು ಸಾಗಿಸುವ ವಾಹನಗಳನ್ನು ಜೋಕಟ್ಟೆ ಬಳಿ ತಪಾಸಣೆ ಮಾಡುತ್ತಿರುವಾಗ ಟಿಪ್ಪರ್ ಲಾರಿಯಲ್ಲಿ ಭೂಗಣಿ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮರಳು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಜೂ.15 ರಿಂದ ಮರಳು ತೆಗೆದು ಸಾಗಾಣಿಕೆ ಮಾಡುವುದನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಿದರೂ ಕೂಡಾ ಮರಳನ್ನು ಕಳವುಗೈದು ಲಾರಿಯಲ್ಲಿ ತುಂಬಿಸಿಕೊಂಡು ಹೋಗುತ್ತಿರುವುದು ನಡೆಯುತ್ತಲೇ ಇದೆ.
Next Story





