Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. -- ಕಣ್ಣಿಂದ ಜಾರಿದ ಹನಿ --

-- ಕಣ್ಣಿಂದ ಜಾರಿದ ಹನಿ --

ಧಾರಾವಾಹಿ-5

ವಾರ್ತಾಭಾರತಿವಾರ್ತಾಭಾರತಿ2 July 2016 11:53 PM IST
share
-- ಕಣ್ಣಿಂದ ಜಾರಿದ ಹನಿ --

ಪತ್ತಿರ್‌ಗೆ ಹಿಟ್ಟು ಹದ ಮಾಡಿದ ಐಸು ಅದನ್ನು ಪುಟ್ಟ ಪುಟ್ಟ ಉಂಡೆ ಮಾಡಿ ಮಣೆಯಲ್ಲಿಟ್ಟು ಒಂದೊಂದೇ ಪತ್ತಿರನ್ನು ಒತ್ತಿ, ಕಾವಲಿಗೆ ಹಾಕಿ ಕಾಯಿಸಿ, ಅದಕ್ಕೆ ತುಪ್ಪ ಸವರಿ ಒಂದು ಪಾತ್ರೆಯಲ್ಲಿ ಬಿಳಿ ಬಟ್ಟೆ ಹಾಕಿ, ಅದರಲ್ಲಿ ಮಡಿಸಿಡುವುದನ್ನು ಕಣ್ಣರಳಿಸಿ ನೋಡುತ್ತಿದ್ದ ತಾಹಿರಾ, ‘‘ಮಾಮಿ ಇಲ್ಲಿ ಕೊಡಿ, ನಾನು ಒತ್ತಿ ಕೊಡುತ್ತೇನೆ’’ ಎಂದಾಗ ಐಸು ಅವಳಿಗೆ ಪತ್ತಿರ್ ಒತ್ತುವುದನ್ನು ಕಲಿಸಿಕೊಟ್ಟಳು. ತಾಹಿರಾ ಒಂದೊಂದೇ ಪತ್ತಿರನ್ನು ಒತ್ತಿ ಕೊಡುತ್ತಿದ್ದಾಗ ಅವಳಲ್ಲಿ ಉಕ್ಕುತ್ತಿದ್ದ ಉತ್ಸಾಹ, ಅವಳ ಖುಷಿ ಕಂಡು ಐಸುಗೂ ಖುಷಿಯಾಗಿತ್ತು.

‘‘ಮಾಮಿ ನನಗೀಗ ಪತ್ತಿರ್ ಮಾಡಲು ಬರುತ್ತದೆ ಅಲ್ವಾ?’’
‘‘ಹೂಂ... ಇನ್ನೊಂದೆರಡು ಸಲ ನೋಡಿದರೆ ನೀನೇ ಮಾಡ್ತಿ’’
‘‘ನಿಮಗೆ ಈ ಪತ್ತಿರ್ ಮಾಡಲು ಯಾರು ಕಲಿಸಿದ್ದು ಮಾಮಿ?’’
‘‘ನಾನು ಹೀಗೆಯೇ ನನ್ನ ತಾಯಿ ಮಾಡುವುದನ್ನು ನೋಡಿಯೇ ಕಲಿತದ್ದು. ಆಗ ಈ ರೀತಿಯ ಒತ್ತುವ ಚಪಾತಿ ಮಣೆ ಇರಲಿಲ್ಲ. ಕಬ್ಬಿಣದ ಕಾವಲಿ ಇರಲಿಲ್ಲ. ಗ್ಯಾಸ್‌ನ ಒಲೆ ಇರಲಿಲ್ಲ. ಮರದ ಮಣೆಗೆ ಬಿಳಿ ಬಟ್ಟೆ ಹಾಕಿ, ಅದರ ಮೇಲೆ ಹದ ಮಾಡಿದ ಹಿಟ್ಟು ಉಂಡೆ ಮಾಡಿ ಇಟ್ಟು ಬೆರಳಿನಿಂದ ಒತ್ತಬೇಕು. ಸೌದೆಯ ಒಲೆಯ ಮೇಲೆ ಮಣ್ಣಿನ ಓಡಿನಲ್ಲಿ ಸುಡಬೇಕು. ಅಂದಿನ ಓಡಿನಲ್ಲಿ ಸುಟ್ಟ ಪತ್ತಿರಿಗಿರುವ ರುಚಿ ಇಂದಿನ ಈ ಪತ್ತಿರ್‌ಗೆ ಹೇಗೆ ಬರಬೇಕು ಹೇಳು. ಅಜ್ಜಿಯಂತೂ ಈ ಪತ್ತಿರ್ ತಿನ್ನುವಾಗ ಹಿಂದೆ ಅವರು ಮಾಡುತ್ತಿದ್ದ ಪತ್ತಿರ್ ನೆನೆದು ಮಣಮಣ ಮಾಡ್ತಾ ಇರ್ತಾರೆ’’
ಈ ಮನೆಯಲ್ಲಿ ಏನು ಮಾಡಿದರೂ ಐಸು ಮೊದಲು ಕೊಡುವುದು ಅಜ್ಜಿಗೆ. ಹಾಗೆಯೇ ತಟ್ಟೆಗೆ ಪತ್ತಿರ್, ಬೊಲೆಂಜಿರ್ ಸಾರು, ಹುರಿದ ಬಂಗುಡೆ ಹಾಕಿ ಅಜ್ಜಿ ಕೋಣೆಗೆ ಬಂದಳು. ಅಜ್ಜಿ ರಾತ್ರಿಯ ನಮಾಝ್ ಮುಗಿಸಿ ಜಪಸರ ಹಿಡಿದು ತಸ್ಬೀಹ್ ಹೇಳ್ತಾ ಇದ್ದರು.
‘‘ಅಜ್ಜೀ ನಾಸ್ಟಾ ತಂದಿದ್ದೇನೆ, ಬೇಗ ತಿನ್ನಿ. ಆರಿ ಹೋಗುತ್ತೆ’’
ಅಜ್ಜಿ ಜೋರಾಗಿ ತಸ್ಬೀಹ್ ಹೇಳುತ್ತಲೇ ಇದ್ದರು. ಐಸು ಪಾತ್ರೆಗಳನ್ನು ಅಲ್ಲಿಯೇ ಮೇಜಿನ ಮೇಲೆ ಜೋಡಿಸಿಟ್ಟು ಬಂದಳು.

ಪತ್ತಿರ್ ಪಾತ್ರೆಯನ್ನು ಹತ್ತಿರ ಇಟ್ಟುಕೊಂಡು, ಒಂದು ಪಾತ್ರೆಗೆ ಬೊಲೆಂಜಿರ್ ಸಾರು ಹಾಕಿ, ಒಂದು ತಟ್ಟೆಯಲ್ಲಿ ಹುರಿದ ಬಂಗುಡೆ ಇಟ್ಟುಕೊಂಡು ಅಡುಗೆ ಮನೆಯಲ್ಲಿ ನೆಲದಲ್ಲಿಯೇ ಚಕ್ಕಳ ಮಕ್ಕಳ ಹಾಕಿಕೊಂಡು ಇಬ್ಬರು ತಿನ್ನಲು ಕುಳಿತರು. ಒಂದೊಂದು ಪತ್ತಿರನ್ನು ತಿನ್ನುವಾಗಲೂ ತಾಹಿರಾಳ ಮುಖದಲ್ಲಿ ಕಾಣುವ ಖುಷಿಯನ್ನು ಐಸು ಗಮನಿಸುತ್ತಿದ್ದಳು. ಬೊಲೆಂಜಿರ್‌ನ ಮುಳ್ಳನ್ನು ತೆಗೆದು ಅವಳ ಕೈಗಿಟ್ಟಳು. ಹುರಿದ ಮೀನನ್ನು ಮುಳ್ಳು ಬಿಡಿಸಿ ಬಾಯಿಗೆ ಕೊಟ್ಟಳು. ಐಸು ತಾನು ತಿನ್ನುವುದಕ್ಕಿಂತಲೂ ತಾಹಿರಾಳಿಗೆ ತಿನಿಸುವುದರಲ್ಲಿಯೇ ಹೆಚ್ಚು ತೃಪ್ತಿ ಪಟ್ಟಳು.
‘‘ಮಾಮಿ, ನನ್ನ ಜೀವನದಲ್ಲಿ ಹಿಂದೆಂದೂ ಇಷ್ಟೊಂದು ರುಚಿಯಾದ ತಿಂಡಿ ತಿಂದದ್ದು ನನಗೆ ನೆನಪಿಲ್ಲ’’
‘‘ಅದಕ್ಕೇನಂತೆ, ನೀನು ಇಲ್ಲಿರುವಷ್ಟು ದಿನ ಇದಕ್ಕಿಂತಲೂ ಒಳ್ಳೊಳ್ಳೆಯ ತಿಂಡಿಗಳನ್ನು ಮಾಡಿ ತಿನ್ನಿಸ್ತೇನೆ ಆಯಿತಲ್ಲಾ...’’
‘‘ಮಾಮಿ, ನಿಮ್ಮ ತಿಂಡಿಯ ರುಚಿಗಿಂತಲೂ ನೀವು ನನ್ನ ಪಕ್ಕ ಕುಳಿತು ನಿಮ್ಮ ಕೈಯಾರೆ ನನ್ನ ಬಾಯಿಗೆ ಉಣಿಸಿದಿರಿ ನೋಡಿ, ಆ ಪ್ರೀತಿಯನ್ನು ನಾನು ಯಾವತ್ತೂ ಮರೆಯೋದಿಲ್ಲ. ಇಂತಹ ಪ್ರೀತಿ ನನ್ನ ತಾಯಿ-ತಂದೆ ಬದುಕಿದ್ದೂ ನನಗೆ ಈ ತನಕ ಸಿಗಲಿಲ್ಲ.’’ ತಾಹಿರಾಳ ಧ್ವನಿ ಸಣ್ಣಗೆ ಕಂಪಿಸುತ್ತಿರುವುದನ್ನು ಐಸು ಗಮನಿಸಿದಳು.
‘‘ನೀನು ತಿನ್ನು ಈಗ, ತಿನ್ನುವಾಗ ಮಾತನಾಡ ಬಾರದು. ಆಮೇಲೆ ಬೆಳಗಿನ ತನಕ ಬೇಕಾದರೂ ಕುಳಿತು ಮಾತನಾಡುವ...’’
ತಾಹಿರಾಳಿಗೆ ಹೊಟ್ಟೆ ತುಂಬಾ ತಿನಿಸಿದ ಐಸು, ತಾನೂ ಎಂದಿಗಿಂತಲೂ ಎರಡು ಪತ್ತಿರ್ ಜಾಸ್ತಿಯೇ ತಿಂದಳು. ಅಡುಗೆ ಮನೆಯ ಕೆಲಸಗಳನ್ನೆಲ್ಲ ಮುಗಿಸಿ ಅಜ್ಜಿಯ ಕೋಣೆಗೆ ಬಂದಾಗ ಅಜ್ಜಿ ನಾಸ್ಟಾ ಮಾಡುತ್ತಿದ್ದರು. ಅವರು ತಿಂದಾಗುವವರೆಗೂ ಅಲ್ಲೇ ಇದ್ದು, ಅವರ ಹಾಸಿಗೆ, ದಿಂಬು, ರಗ್ಗು ಸರಿಪಡಿಸಿ, ಕುಡಿಯಲು ಒಂದು ಪಾತ್ರೆಯಲ್ಲಿ ನೀರು ತಂದಿಟ್ಟಳು. ಅವರು ತಿಂದ ತಟ್ಟೆಯನ್ನು ತೊಳೆದಿಟ್ಟು, ಒಂದಿಷ್ಟು ಸಾಂಬ್ರಾಣಿಯನ್ನು ತಂದು ಪಾತ್ರೆಯ ಕೆಂಡಕ್ಕೆ ಹಾಕಿದಳು. ಅದರ ಹೊಗೆಯೇಳುತ್ತಿದ್ದಂತೆಯೇ ಅದನ್ನು ಮೂಲೆಗೆ ಸರಿಸಿದಳು.
‘ಅಜ್ಜೀ, ಇನ್ನು ಏನೆಲ್ಲ ಯೋಚನೆ ಮಾಡಬೇಡಿ. ಮತ್ತೆ ರಾತ್ರಿಯೆಲ್ಲ ನಿದ್ದೆ ಬರುವುದಿಲ್ಲ ನಿಮಗೆ. ಸುಮ್ಮನೆ ಮಲಗಿ’’ ಎಂದು ಅಜ್ಜಿಯ ಬಳಿ ಸ್ವಲ್ಪಹೊತ್ತು ನಿಂತಳು. ಅಜ್ಜಿ ಮಾತನಾಡಲಿಲ್ಲ. ಗಂಭೀರವಾಗಿಯೇ ಇದ್ದರು. ಮೊಮ್ಮಗಳ ಬಗ್ಗೆ ಕೂಡಾ ಒಂದು ಮಾತು ಕೇಳಲಿಲ್ಲ. ಐಸು ಬಾಗಿಲೆಳೆದು ಬಂದು, ಒಂದು ಕೋಣೆಗೆ ತಾಹಿರಾಳನ್ನು ಕರೆದುಕೊಂಡು ಹೋಗಿ ಹಾಸಿಗೆ ಸಿದ್ಧಪಡಿಸಿದಳು.
‘‘ಮಲಗು, ಕಳೆದ ರಾತ್ರಿಯೆಲ್ಲಾ ನಿದ್ದೆ ಇಲ್ಲದೆ ಪ್ರಯಾಣ ಮಾಡಿ ಬಂದಿದ್ದಿ. ಗಟ್ಟಿ ನಿದ್ದೆ ಮಾಡು. ನಿದ್ದೆ ಕೆಟ್ಟರೆ ಆರೋಗ್ಯ ಹಾಳಾಗುತ್ತೆ’’
ತಾಹಿರಾ ಐಸುವಿನ ಮುಖವನ್ನೇ ನೋಡುತ್ತಿದ್ದಳು. ಆ ಕಣ್ಣು, ಮಾತುಗಳಲ್ಲಿ ತುಂಬಿ ತುಳುಕುತ್ತಿರುವ ಪ್ರೀತಿ ಕಂಡು ಅವಳು ಮೂಕಳಾಗಿದ್ದಳು.

‘‘ಮಾಮಿ ನೀವೆಲ್ಲಿ ಮಲಗುವುದು?’ ‘‘ಇಲ್ಲೇ ಹೊರಗೆ ಮಲಗುತ್ತೇನೆ. ಒಮ್ಮಮ್ಮೆ ಅಜ್ಜಿ ಕರೆಯುತ್ತಾರೆ. ಯಾಕೆ ಇಲ್ಲಿ ನಿನಗೆ ಒಬ್ಬಳೇ ಮಲಗಲಿಕ್ಕೆ ಭಯಾನಾ?’’
‘‘ಭಯವಿಲ್ಲ...’’
‘‘ನಾನು ನೆಲದಲ್ಲಿ ಚಾಪೆ ಹಾಕಿ ಮಲಗುವುದು. ನಿನಗೆ ಅಲ್ಲಿ ಸರಿಯಾಗಲಿಕ್ಕಿಲ್ಲ. ನಿದ್ದೆ ಬರುವವರೆಗೆ ನಾನು ಇಲ್ಲೇ ಇರ್ತೇನೆ ಆಯಿತಲ್ಲಾ’’
ಹಾಗೆ ಅವರು ಬಹಳ ಹೊತ್ತಿನವರೆಗೆ ಮಾತನಾಡುತ್ತಲೇ ಇದ್ದರು. ಆಮೇಲೆ ಅದ್ಯಾವಾಗ ತಾಹಿರಾಳಿಗೆ ನಿದ್ದೆ ಹತ್ತಿತೋ ಗೊತ್ತಿಲ್ಲ, ಮಧ್ಯರಾತ್ರಿ ಇರಬಹುದು ಅದ್ಯಾರದೋ ನರಳಾಟ, ಮಾತು ಕೇಳಿ ಅವಳಿಗೆ ತಟ್ಟನೆ ಎಚ್ಚರವಾಯಿತು. ಎದ್ದು ಕುಳಿತು ಮತ್ತೆ ಆಲಿಸಿದಳು. ಹೌದು ಯಾರೋ ಅಳುತ್ತಿದ್ದಾರೆ. ಏನೇನೋ ಮಾತು. ಅವಳಿಗೆ ಒಂದೂ ಅರ್ಥವಾಗಲಿಲ್ಲ. ಮಂಚದಿಂದ ಇಳಿದು ಕೋಣೆಯ ಹೊರಗೆ ಬಂದಳು. ಮಾಮಿ ಕಾಣಲಿಲ್ಲ. ಮಾತು ಕೇಳಿ ಬರುತ್ತಿರುವುದು ಅಜ್ಜಿಯ ಕೋಣೆಯಿಂದ ಎಂಬುದು ಖಾತ್ರಿಯಾಗಿ ಮೆಲ್ಲನೆ ಅತ್ತ ಹೆಜ್ಜೆ ಹಾಕಿ ಬಾಗಿಲ ಬಳಿ ನಿಂತು ಕಿವಿಯಾನಿಸಿದಳು. ಅಜ್ಜಿ ಯಾರ ಜೊತೆಯೋ ಮಾತಾಡ್ತಾ ಇದ್ದಾರೆ. ಮಧ್ಯೆಮಧ್ಯೆ ಅಳುತ್ತಿದ್ದಾರೆ. ನರಳುತ್ತಿದ್ದಾರೆ.
ಯಾರ ಜೊತೆ ಮಾತಾಡ್ತಾ ಇದ್ದಾರೆ, ಯಾಕೆ ಅಳ್ತಾ ಇದ್ದಾರೆ, ಒಳಗೆ ಯಾರಿರಬಹುದು? ಮತ್ತೂ ಸ್ವಲ್ಪ ಹೊತ್ತು ಅಲ್ಲೇ ನಿಂತು ಆಲಿಸಿದಳು. ಅಸ್ಪಷ್ಟ ಮಾತು ಗಳು ಅವಳಿಗೊಂದೂ ಅರ್ಥವಾಗಲಿಲ್ಲ. ಮೆಲ್ಲನೆ ಬಾಗಿಲು ದೂಡಿದಳು. ಒಳಗೆ ಚಿಲಕ ಹಾಕಲಾಗಿತ್ತು. ಮಾಮಿಯನ್ನು ಹುಡುಕುತ್ತಾ ಹಜಾರಕ್ಕೆ ಬಂದವಳಿಗೆ ಅವರು ಅಲ್ಲೇ ನೆಲದಲ್ಲಿ ಮಲಗಿರುವುದು ಕಂಡು ಅವರ ಪಕ್ಕ ಕುಳಿತು, ‘‘ಮಾಮಿ... ಮಾಮಿ...’’ ಎಂದು ಕರೆದಳು. ಎದ್ದು ಕುಳಿತ ಐಸುಳಿಗೆ ತಾಹಿರಾಳ ಮುಖದ ತುಂಬಾ ಗಾಬರಿ ಕಂಡು ‘‘ಏನಮ್ಮಾ...’’ ಎಂದು ಕೇಳಿದಳು
‘‘ಮಾಮಿ...... ಅಲ್ಲಿ ಅಜ್ಜಿ ಕೋಣೆಯಲ್ಲಿ...’’
‘‘ಓ ಅದಾ... ಅದು ಏನಿಲ್ಲ. ಹೋಗು ಮಲಗು...’’
‘‘ಅಲ್ಲ ಮಾಮಿ, ಅಲ್ಲಿ ಅಜ್ಜಿ ಅಳ್ತಾ ಇದ್ದಾರೆ’’
‘‘ಭಯವಾಗ್ತಾ ಇದೆಯಾ...’’
‘‘ಹೂಂ...’’
‘‘ಸರಿ ನಾನು ಬರ್ತೇನೆ ಹೋಗುವ’’ ಐಸು ಎದ್ದು ಹೋಗಿ ಅವಳ ಜೊತೆಗೆ ಮಲಗಿದಳು. ಅಜ್ಜಿ ಕೋಣೆಯಲ್ಲಿ ಇನ್ನೂ ಮಾತು, ನರಳಾಟ, ಅಳು ಕೇಳಿಸುತ್ತಲೇ ಇತ್ತು. ತಾಹಿರಾ ಮಾಮಿಯನ್ನು ಅಪ್ಪಿ ಹಿಡಿದು ಮಲಗಿದಳು. ಐಸು ಅವಳ ತಲೆ ಸವರಿ ಬೆನ್ನು ತಟ್ಟತೊಡಗಿದಳು.
‘‘ಯಾರು ಮಾಮಿ ಅಜ್ಜಿ ಕೋಣೆಯಲ್ಲಿ’’
‘‘ಅದೆಲ್ಲ ಬೆಳಗ್ಗೆ ಹೇಳ್ತೇನೆ, ಈಗ ನೀನು ಮಲಗು’’
‘‘ಅಜ್ಜಿ ಅಳ್ತಾ ಇದ್ದಾರೆ...!’’
‘‘................’’
‘‘ಅಜ್ಜಿಗೇನಾಗಿದೆ ಮಾಮಿ...?’’
‘‘................’’
ಆ ಮೇಲಿನ ಅವಳ ಯಾವ ಪ್ರಶ್ನೆಗೂ ಐಸು ಉತ್ತರಿಸಲಿಲ್ಲ. ನಿದ್ದೆ ಬಂದಂತೆ ಕಣ್ಣು ಮುಚ್ಚಿ ಮಲಗಿ ದ್ದಳು.
ಮತ್ತೆ ತಾಹಿರಾಳಿಗೆ ಎಚ್ಚರವಾದಾಗ ಬೆಳಕು ಹರಿಯತೊಡಗಿತ್ತು. ಪಕ್ಕದಲ್ಲಿ ಐಸು ಇರಲಿಲ್ಲ. ಬೆಳಗ್ಗೆ ಮೈಯೆಲ್ಲಾ ಜಡವಾದಂತೆನಿಸಿ ಹಾಗೇ ಮುಖದ ತುಂಬಾ ರಗ್ಗು ಹೊದ್ದುಕೊಂಡಳು. ಆಗಲೇ ಬಾಗಿಲ ಬಳಿ ಸದ್ದಾದಂತಾಗಿ ರಗ್ಗಿನೊಳಗಿನಿಂದಲೇ ಇಣುಕಿ ನೋಡಿದಳು. ಅಜ್ಜಿ! ಅಜ್ಜಿ ಅವಳ ಬಳಿ ಬರುತ್ತಿದ್ದರು! ಅವಳು ನಿದ್ದೆ ಬಂದಂತೆ ನಟಿಸಿದಳು. ಅಜ್ಜಿ ಒಂದು ಕ್ಷಣ ನಿಂತು ಮಂಚದಲ್ಲಿ ಅವಳ ಪಕ್ಕ ಕುಳಿತರು. ಅವಳ ತಲೆಯ ಮೇಲಿನ ರಗ್ಗು ಸರಿಸಿ ಅವಳ ಮುಖವನ್ನೇ ದಿಟ್ಟಿಸಿ ನೋಡಿದರು. ಅನಂತರ ಮೃದುವಾಗಿ ಅವಳ ತಲೆ ಸವರಿ, ಬಾಗಿ ಹಣೆಗೊಂದು ಮುತ್ತು ನೀಡಿದರು. ಆಗ ಅವರ ಕಣ್ಣಿಂದ ಉದುರಿದ ಒಂದು ಹನಿ ಅವಳ ಮುಖದ ಮೇಲೆ ಬಿತ್ತು. ಅವಳು ನೋಡುತ್ತಿದ್ದಂತೆಯೇ ಅಜ್ಜಿ ಎದ್ದು ಕಣ್ಣೊರೆಸುತ್ತಾ ಕೋಣೆಯಿಂದ ಹೊರ ನಡೆದರು.

ಅನಂತರ ತಾಹಿರಾಳಿಗೆ ಮಲಗಲಾಗಲಿಲ್ಲ. ಎದ್ದು ಸ್ವಲ್ಪ ಹೊತ್ತು ಹಾಗೆಯೇ ಕುಳಿತವಳು ಐಸುಳನ್ನು ಹುಡುಕುತ್ತಾ ಅಡುಗೆ ಮನೆಗೆ ನಡೆದಳು. ಅಲ್ಲಿ ಐಸು ಮೂಡೆ ಮಾಡುತ್ತಿದ್ದಳು. ‘‘ಹೋಗು, ಮುಖ ತೊಳೆದು ಬಾ. ನಿನಗಾಗಿ ಮೂಡೆ ಮಾಡಿದ್ದೇನೆ. ತಿನ್ನುವಿಯಂತೆ’’
ತಾಹಿರಾ ಅಲ್ಲೇ ಇದ್ದ ಸ್ಟೂಲು ಎಳೆದು ಕುಳಿತಳು.
‘‘ಮೂಡೆ ತಿಂದಿದ್ದೀಯಾ ನೀನು?’’
‘‘ಉಹೂಂ...’’
‘‘ಬೆಲ್ಲ, ಏಲಕ್ಕಿ ಹಾಕಿ ತೆಂಗಿನಹಾಲು ಮಾಡಿದ್ದೇನೆ. ತಿಂದು ನೋಡು, ತುಂಬಾ ರುಚಿಯಾಗಿರುತ್ತದೆ’’
‘‘ಮಾಮಿ, ರಾತ್ರಿ ಅಜ್ಜಿಯ ಕೋಣೆಯಲ್ಲಿ ಯಾರಿದ್ದರು, ಅವರು ಯಾಕೆ ಅಳುತ್ತಿದ್ದರು?’’
‘‘ಅದೇನು ಅಷ್ಟು ಅವಸರ. ಮೊದಲು ಮುಖ ತೊಳೆದು ಬಾ, ಅನಂತರ ಎಲ್ಲಾ ಹೇಳ್ತೇನೆ’’
ಮುಖ ತೊಳೆದು ಬಂದ ತಾಹಿರಾಳಿಗೆ ಮೂಡೆ, ತೆಂಗಿನಕಾಯಿ ಹಾಲು ಬಡಿಸಿದ ಐಸು, ಅದನ್ನು ಹೇಗೆ ತಿನ್ನುವುದೆಂದು ಹೇಳಿಕೊಟ್ಟಳು.
‘‘ಚೆನ್ನಾಗಿದೆಯಾ...?’’
‘‘ಹೂಂ...’’
ಯಾಕಮ್ಮಾ ಮಂಕಾಗಿದ್ದಿಯಾ?’’
‘‘ಅಜ್ಜಿ ಕೋಣೆಯಲ್ಲಿ ರಾತ್ರಿ ಯಾರಿದ್ದರು ಮಾಮಿ. ಅವರು ಯಾಕೆ ಅಳ್ತಾ ಇದ್ದರು’’
‘‘ಅದಕ್ಕೆ ಯಾಕೆ ಹೀಗೆ ನೊಂದುಕೊಳ್ಳುತ್ತಿಯಾ, ವಾರದಲ್ಲಿ ಒಂದು ದಿನವಾದರೂ ಹೀಗೆ ಅವರ ಕೋಣೆಯಲ್ಲಿ ಮಾತು, ಜಗಳ, ಅಳು, ನಗು ಎಲ್ಲಾ ನಡೆಯುತ್ತಿರುತ್ತದೆ. ಕೇಳಿದರೆ ರಾತ್ರಿ ನಿನ್ನ ಅಜ್ಜ ಬಂದಿದ್ದರು ಎಂದು ಹೇಳ್ತಾರೆ. ಒಮ್ಮಾಮ್ಮೆ ಬೆಳಗಿನ ತನಕವೂ ಈ ಮಾತುಕತೆ ನಡೆಯುತ್ತಾ ಇರುತ್ತದೆ. ನೀನು ಬಂದಿದ್ದಿಯಲ್ಲಾ ಅದಕ್ಕೆ ಅಜ್ಜ ಬಂದಿರಬಹುದು. ನನಗೂ ಕೇಳಿಸ್ತಾ ಇತ್ತು. ಕಳೆದ ರಾತ್ರಿ ಸ್ವಲ್ಪಜೋರಿದ್ದ ಹಾಗಿತ್ತು’’
‘‘ನಿಮಗೆ ಹೋಗಿ ನೋಡ್ಲಿಕ್ಕೆ ಆಗೋದಿಲ್ಲವಾ?’’
‘‘ಇಲ್ಲ, ಅಜ್ಜ ಬರುವ ದಿನ ಅವರು ಬಾಗಿಲಿಗೆ ಒಳಗಿಂದ ಚಿಲಕ ಹಾಕಿ ಇರ್ತಾರೆ. ಬಡಿದರೂ ಬಾಗಿಲು ತೆರೆಯುವುದಿಲ್ಲ. ಮೊದಮೊದಲು ನನಗೂ ಭಯವಾಗ್ತಾ ಇತ್ತು. ಈಗ ಅಭ್ಯಾಸವಾಗಿ ಹೋಗಿದೆ. ನಿನಗೆ ಭಯವಾಯಿತಾ?’’
‘‘ಹೂಂ..., ಈಗ ನನ್ನ ಕೋಣೆಗೆ ಬಂದಿದ್ದರು. ನನಗೆ ನಿದ್ದೆ ಬಂದಿದೆ ಎಂದೆನಿಸಿ ತಲೆ ಸವರಿ, ಹಣೆಗೆ ಮುತ್ತಿಕ್ಕಿದರು. ಅವರು ಅಳುತ್ತಾ ಇದ್ದರು. ಮಾಮಿ, ನಾನು ಹೋಗಿ ಮಾತನಾಡಿಸಿಕೊಂಡು ಬರಲಾ...’’
‘‘ನೀನು ತಿಂಡಿ ತಿನ್ನು. ನಾನು ಹೋಗಿ ಹೇಗಿದ್ದಾ ರೇಂತ ನೋಡಿ ಬರುತ್ತೇನೆ. ಒಮ್ಮಾಮ್ಮೆ ಅಜ್ಜ ಬಂದ ಮರುದಿನ ಖುಷಿಯಾಗಿರ್ತಾರೆ. ಒಮ್ಮೆಮ್ಮೆ ಎರಡು- ಮೂರು ದಿನ ಯಾರ ಹತ್ತಿರವೂ ಮಾತನಾಡುವುದಿಲ್ಲ’’
‘‘ನಿಜವಾಗಿಯೂ ಅಜ್ಜ ಬರ್ತಾರಾ ಮಾಮಿ?’’

(ಗುರುವಾರದ ಸಂಚಿಕೆಗೆ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X