ಜಾರ್ಖಂಡ್ ಬಿಜೆಪಿ ಅಧ್ಯಕ್ಷ ಹಾಗೂ ಪುತ್ರನ ವಿರುದ್ಧ ಪ್ರಕರಣ ದಾಖಲು
11ರ ಬಾಲಕಿ ಜೊತೆ ಪುತ್ರನ ವಿವಾಹ
ರಾಂಚಿ, ಜು.3: 11 ವರ್ಷದ ಬಾಲಕಿ ಜೊತೆ ತಮ್ಮ ಪುತ್ರನ ವಿವಾಹ ನೆರವೇರಿಸಿದ ಬಿಜೆಪಿ ಜಾರ್ಖಂಡ್ ರಾಜ್ಯ ಘಟಕದ ಅಧ್ಯಕ್ಷ ತಾಲಾ ಮರಂಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗೊಡ್ಡಾ ಜಿಲ್ಲಾಧಿಕಾರಿ ರಾಹುಲ್ ಸಿನ್ಹಾ ಅವರ ನಿರ್ದೇಶನದ ಅನ್ವಯ, ಬಾಲಕಿಯ ತಂದೆ ಭಗನ್ ಬಕ್ಷಿ ಅವರ ವಿರುದ್ಧವೂ ಬಾಲ್ಯವಿವಾಹ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಬೈರಿರಝಾರ್ ಕ್ಷೇತ್ರ ಅಭಿವೃದ್ಧಿ ಮತ್ತು ಬಾಲ್ಯ ವಿವಾಹ ತಡೆ ಅಧಿಕಾರಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ.
ಜೂನ್ 27ರಂದು ಮರಂಡಿ ಅವರ ಪುತ್ರ ಮುನ್ನಾ 11 ವರ್ಷದ ಬಾಲಕಿಯನ್ನು ವಿವಾಹವಾಗಿದ್ದ. ಮುನ್ನಾ ಮರಂಡಿ ವಿರುದ್ಧ ಮತ್ತೊಬ್ಬ ಹುಡುಗಿಗೆ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಕ್ರಿಯೆ ನಡೆಸಿದ ಬಗ್ಗೆಯೂ ದೂರು ದಾಖಲಾಗಿದೆ.
Next Story