ಕಡಬ: ಉಚಿತ ವೈದ್ಯಕೀಯ ಶಿಬಿರ
.jpg)
ಕಡಬ, ಜು.3: ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್(ರಿ.) ಪುತ್ತೂರು ಇದರ ಆಶ್ರಯದಲ್ಲಿ ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್(ರಿ.) ಕಡಬ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಸಹಭಾಗಿತ್ವದಲ್ಲಿ 'ಬೃಹತ್ ಉಚಿತ ವೈದ್ಯಕೀಯ ಶಿಬಿರ'ದ ಉದ್ಘಾಟನೆಯು ಕಡಬದ ಸೈಂಟ್ ಜೋಕಿಮ್ಸ್ ಪದವಿಪೂರ್ವ ಕಾಲೇಜಿನ ವಠಾರಲ್ಲಿ ರವಿವಾರ ನಡೆಯಿತು.
ಪುತ್ತೂರು ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಹಾರೈಸಿದರು.
ಶ್ರೀ ಸರಸ್ವತೀ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ವಿನಯ ಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಕಡಬದ ಹಿರಿಯ ವೈದ್ಯ ಡಾ. ಸಿ.ಕೆ. ಶಾಸ್ತ್ರಿ, ಸೈಂಟ್ ಆನ್ಸ್ ವಿದ್ಯಾಸಂಸ್ಥೆಯ ಧರ್ಮಗುರು ಫಾ.ಪೌಲ್ ಕ್ರಾಸ್ತಾ, ಶ್ರೀ ಸರಸ್ವತೀ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಉಪ ಪ್ರಧಾನ ವ್ಯವಸ್ಥಾಪಕಿ ಭವಾನಿ ಪ್ರಭು ಸಾಂದರ್ಭಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಜೇಸಿಐ ಕಡಬ ಕದಂಬ ಘಟಕಾಧ್ಯಕ್ಷ ಜೇಸಿ. ಜಯರಾಂ ಆರ್ತಿಲ, ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್(ರಿ.) ಅಧ್ಯಕ್ಷ ಜೆಎಫ್ ಎಮ್ ನಾಗರಾಜ್ ಎನ್.ಕೆ., ಜೇಸಿ ವಲಯ 15ರ ವಲಯಾಧಿಕಾರಿ ಜೇಸಿ. ಅಶೋಕ್ ಕುಮಾರ್ ಪಿ., ಕಾರ್ಯದರ್ಶಿ ಜೇಸಿ. ರವಿಚಂದ್ರ ಪಡುಬೆಟ್ಟು ಉಪಸ್ಥಿತರಿದ್ದರು.
ಶ್ರೀ ಸರಸ್ವತೀ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಕಡಬ ಶಾಖಾ ವ್ಯವಸ್ಥಾಪಕ ಸತೀಶ್ಚಂದ್ರ ಸ್ವಾಗತಿಸಿ, ಕಾರ್ಯದರ್ಶಿ ಜೇಸಿ. ರವಿಚಂದ್ರ ಪಡುಬೆಟ್ಟು ವಂದಿಸಿದರು. ಜೇಸಿ ಶಿವಪ್ರಸಾದ್ ರೈ ಮೈಲೇರಿ ಕಾರ್ಯಕ್ರಮ ನಿರೂಪಿಸಿದರು.
ಈ ಶಿಬಿರದಲ್ಲಿ ಸಾಮಾನ್ಯ ರೋಗ ತಜ್ಞರು, ಕಣ್ಣಿನ ತಜ್ಞರು, ಕಿವಿ, ಮೂಗು ಮತ್ತು ಗಂಟಲು ತಜ್ಞರು, ಮಕ್ಕಳ ತಜ್ಞರು, ಸ್ತ್ರೀ ರೋಗ ತಜ್ಞರು, ಎಲುಬು ತಜ್ಞರು ಸೇರಿದಂತೆ ಹಲವು ನುರಿತ ಹಿರಿಯ ವೈದ್ಯಾಧಿಕಾರಿಗಳು ಆಗಮಿಸಿದ್ದರು. ಹಲವು ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದರು.







