ಸಕಲೇಶಪುರ: ಛಾಯಾಗ್ರಹಕರ ಶಾಂತಿಯುತ ಬಂದ್‌ಗೆ ತಾಲ್ಲೂಕಿನಲ್ಲಿ ಸಂಪೂರ್ಣ ಬೆಂಬಲ

ಸಕಲೇಶಪುರ,ಜು.3: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಛಾಯಾಗ್ರಾಹಕರ ಸಂಘ ಶನಿವಾರ ಕರೆದಿದ್ದ ರಾಜ್ಯದಾಧ್ಯಂತ ಛಾಯಾಗ್ರಹಕರ ಶಾಂತಿಯುತ ಬಂದ್‌ಗೆ ತಾಲ್ಲೂಕಿನಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಯಿತು.
ತಾಲ್ಲೂಕು ಛಾಯಾಗ್ರಾಹಕರ ಸಂಘದ ನೇತೃತ್ವದಲ್ಲಿ ಎಲ್ಲಾ ಛಾಯಾಗ್ರಾಹಕರು ಬಿ.ಎಂ. ರಸ್ತೆಯಿಂದ ಮಿನಿ ವಿಧಾನ ಸೌಧ ವರೆಗೆ ಮೌನ ಮೆರವಣಿಗೆ ನಡೆಸಿದರು. ಲಕ್ಷಾಂತರ ನಿರುದ್ಯೋಗಿಗಳು ಸರ್ಕಾರಕ್ಕೆ ಭಾರವಾಗದೆ, ಛಾಯಾಗ್ರಹಣವನ್ನೇ ಜೀವನಾದಾರ ಮಾಡಿಕೊಂಡು ಬದುಕುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ವರೆಗೆ ಛಾಯಾಗ್ರಾಕರ ವೃತ್ತಿಂು ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ.
ಛಾಯಾಗ್ರಹಣ ಒಂದು ಕಲೆ. ಅದನ್ನು ಉಳಿಸಿ ಬೆಳೆಸುವುದಕ್ಕೆ ಸರ್ಕಾರ ಪ್ರತ್ಯೇಕ ಅಕಾಡೆಮಿ ತೆರೆಯಬೇಕು. ಉತ್ತಮ ಹಾಗೂ ಕ್ರಿಯಾತ್ಮಕ ಛಾಯಾಗ್ರಾಹಕರನ್ನು ಗುರುತಿಸಬೇಕು. ಪ್ರತಿ ಜಿಲ್ಲೆಗಳಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳು ಹಾಗೂ ಜಿಲ್ಲಾ ಉಸ್ತುವಾರಿಗಳ ಛಾಯಾಗ್ರಹಣದ ಜವಬ್ದಾರಿಯನ್ನು ಆಯಾ ಜಿಲ್ಲೆಗಳ ವೃತ್ತಿಪರ ಛಾಯಾಗ್ರಹಕರಿಗೆ ನೀಡಬೇಕು. ಛಾಯಾಗ್ರಾಹಕರಲ್ಲದ ಮಧ್ಯವರ್ತಿಗಳಿಗೆ ಗುತ್ತಿಗೆದಾರರಿಗೆ ಕೊಡಬಾರದು. ಎಂಬ ಬೇಡಿಕೆಗಳು ಸೇರಿದಂತೆ ಒಟ್ಟು 11 ಬೇಡಿಕೆಗಳ ಮನವಿ ಪತ್ರವನ್ನು ಸಂಘದ ಅಧ್ಯಕ್ಷ ಕರುಣಾಕರ್, ನಿರ್ದೇಶಕರಾದ ಜಾನೇಕೆರೆ ಆರ್. ಪರಮೇಶ್, ಶ್ರೀನಿವಾಸ್, ಪ್ರಕಾಶ್, ಯೋಗೇಶ್ ಮತ್ತಿತರರು ತಹಶೀಲ್ದಾರ್ ಡಿ. ನಾಗೇಶ್ ಅವರಿಗೆ ನೀಡಿದರು.







